ಹರಿಹರ, ಅ.20- ನಗರದ ಕಸಬಾ ಊರಮ್ಮ ದೇವಿ ಮೂಲ ದೇವಸ್ಥಾನದಲ್ಲಿ ಕಳೆದ ಸಾಲಿನಲ್ಲಿ ನಡೆದ ಊರಮ್ಮ ದೇವಿ ಹಬ್ಬದ ಲೆಕ್ಕ ಪತ್ರ ಮಂಡನೆ ಮತ್ತು ಈ ಬಾರಿ ಊರಮ್ಮ ದೇವಿ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಇದೇ ದಿನಾಂಕ 25 ರಂದು ಶಿಬಾರ ವೃತ್ತದ ಕಸಬಾ ಮೂಲ ಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕರೆದಿರುವ ಸಭೆಯ ಅಂಗವಾಗಿ ಹಲವಾಗಲು ಗ್ರಾಮದಿಂದ ನಗರಕ್ಕೆ ಊರಮ್ಮ ದೇವಿಯನ್ನು ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚೆನ್ನಬಸಪ್ಪ, ಬಣಕಾರಗಳಾದ ಸಿದ್ದಪ್ಪ, ಆಂಜನೇಯ, ಶಾನಬೋಗರಾದ ಗಿರೀಶ್, ಹರಿಶಂಕರ್, ಕಳೆದ ಸಾಲಿನ ಊರಮ್ಮ ದೇವಿ ಹಬ್ಬದ ಅಧ್ಯಕ್ಷ ಕೆ.ಅಣ್ಣಪ್ಪ, ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಶೇರಪುರ ರಾಜಪ್ಪ, ಸಹ ಕಾರ್ಯದರ್ಶಿ ಪಾಲಕ್ಷಪ್ಪ, ಗೌಡ್ರುಪುಟ್ಟಪ್ಪ, ಕೆ.ಬಿ.ರಾಜಶೇಖರ, ಬೆಣ್ಣೆ ಸಿದ್ದೇಶ್, ಚಂದನ್ ಮೂರ್ಕಲ್, ಕರಿಬಸಪ್ಪ ಕಂಚಿಕೇರಿ, ಚೂರಿ ಜಗದೀಶ್, ಕಣದಾಳ ಶೇಖಪ್ಪ, ಗಿರೀಶ್ ಗೌಡ, ಜಿ.ನಂಜಪ್ಪ, ಅರ್ಚಕರು ಈರಣ್ಣ ಪೂಜಾರ್, ಅರ್ಜುನ್, ಗಣೇಶಪ್ಪ, ನಾಗರಾಜ್, ಬಸವರಾಜ್, ಹನುಮಂತಪ್ಪ ಚೂರಿ, ಗುತ್ಯಪ್ಪ ಇತರರು ಹಾಜರಿದ್ದರು.