ಮಲೇಬೆನ್ನೂರಿನ ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ

ಮಲೇಬೆನ್ನೂರಿನ ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ

ಮಲೇಬೆನ್ನೂರು, ಅ.17- ಪಟ್ಟಣದ ವಿವಿಧಡೆ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪುರಭೆಯ ಪ್ರಭಾರಿ ಅಧ್ಯಕ್ಷರಾದ ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎಲ್ಲರಿಗೂ ಶುಭಾಷಯ ಕೋರಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಸಾಬೀರ್ ಅಲಿ, ಕೆ.ಜಿ.ಲೋಕೇಶ್, ಬಿ.ವೀರಯ್ಯ, ಬಿ.ಸುರೇಶ್ ಮತ್ತು ನಾಯಕ ಸಮಾಜದ ಮುಖಂಡ ಟಿ.ಗಜೇಂದ್ರಪ್ಪ ಮಾತನಾಡಿ, ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಮಾನವೀಯ ಮೌಲ್ಳು ಮತ್ತು ಆದರ್ಶವನ್ನು ತಿಳಿಸಿಕೊಟ್ಟ ಆದಿಕವಿ ವಾಲ್ಮೀಕಿ ಅವರು ವಿಶ್ವಮಾನವರಾಗಿದ್ದಾರೆ ಎಂದರು.

ಪರಿವರ್ತನೆಗೆ ಮತ್ತೊಂದು ಹೆಸರೇ ವಾಲ್ಮೀಕಿಯಾಗಿದ್ದು, ರಾಮ ಹುಟ್ಟುವುದಕ್ಕಿಂತ ಮೊದಲೇ ರಾಮಾಯಣ ಬರೆದ ಕೀರ್ತಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್ ತಿಳಿಸಿದರು.

ಮಲೇಬೆನ್ನೂರಿನ ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ - Janathavani

ಪುರಸಭೆ ಸದಸ್ಯರಾದ ಶಬ್ಬೀರ್ ಖಾನ್, ಭೋವಿ ಶಿವು, ಷಾ ಅಬ್ರಾರ್, ಟಿ.ಹನುಮಂತಪ್ಪ,  ಎ. ಆರೀಫ್ ಅಲಿ, ದೊಡ್ಮನಿ ಬಸವರಾಜ್, ಪಿ.ಆರ್.ರಾಜು, ಭೋವಿಕುಮಾರ್, ಸುಬ್ಬಿ ರಾಜಣ್ಣ, ಎ.ಕೆ.ಲೋಕೇಶ್, ಪಿ.ಆರ್.ಕುಮಾರ್, ಚಮನ್ ಷಾ, ಪಿ.ಹೆಚ್.ಶಿವಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಶಾವಿಗಿ, ನಾಯಕ ಸಮಾಜದ ಅಧ್ಯಕ್ಷ ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್, ಟಿ.ವಾಸು, ವೇರ್ ಹೌಸ್ ಬಸವರಾಜ್, ಎ.ಕೆ.ನಾಗರಾಜ್, ಪುರಸಭೆ ಅಧಿಕಾರಿಗಳಾದ ನವೀನ್, ಶಿವರಾಜ್, ಧನಂಜಯ್, ಚಿತ್ರಾ, ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಿ.ಮಂಜುನಾಥ್ ಪಟೇಲ್, ಪಿ.ಆರ್.ಕುಮಾರ್, ಸಿ.ಅಬ್ದುಲ್ ಹಾದಿ, ಶ್ರೀಮತಿ ಚಂದ್ರಮ್ಮ, ಯುನೂಸ್, ಸಂಘದ ಸಿಇಓ ಸಿದ್ದಪ್ಪ, ಸಿಬ್ಬಂದಿಗಳಾದ ಪ್ರಕಾಶ್, ಬಸವರಾಜ್, ಜಾಫರ್ ಭಾಗವಹಿಸಿದ್ದರು.

ನಾಡ ಕಚೇರಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿಯಲ್ಲಿ ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಎಸ್‌ಬಿಕೆಎಂ ಶಾಲೆಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮುಖ್ಯ ಶಿಕ್ಷಕ
ದಂಡಿ ತಿಪ್ಪೇಸ್ವಾಮಿ, ಶಿಕ್ಷಕರಾದ ಯಂಕನಾಯ್ಕ, ಜಿ.ಕೆ.ಬಸವರಾಜ್, ಪ್ರೇಮಲೀಲಾ ಬಾಯಿ, ಸಿ.ಹನುಮಂತಪ್ಪ, ಎಂ.ಕೆ.ಸುನೀಲ್ ಇದ್ದರು.

ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್, ಹಿರಿಯ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ಹಾಗೂ ಸಹ ಶಿಕ್ಷಕರಿಯರು ಪಾಲ್ಗೊಂಡಿದ್ದರು.

error: Content is protected !!