ಮಲೇಬೆನ್ನೂರು, ಅ.15- ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ದಲ್ಲಿ ವಿಜಯದಶಮಿ ಮತ್ತು ಮರಿಬನ್ನಿ ಕಾರ್ಯಕ್ರಮದ ಅಂಗವಾಗಿ ಇದೇ ದಿನಾಂಕ 18 ರ ಶುಕ್ರವಾರ ಸಾಮೂಹಿಕ ವಿವಾಹ ಮತ್ತು ದೊಡ್ಡ ಎಡೆ ಜಾತ್ರೆ ಹಮ್ಮಿಕೊಳ್ಳಲಾಗಿದೆ. ನಾಡಿದ್ದು ದಿನಾಂಕ 17ರ ಗುರುವಾರ ಸಂಜೆ 6 ರಿಂದ 8 ರವರೆಗೆ ಕಾಳಿಕಾ ಹೋಮ ಮತ್ತು ರಾತ್ರಿ 10 ರಿಂದ ಶ್ರೀಸ್ವಾಮಿಯ ಒಡ್ಡೋಲಗವು ಡೊಳ್ಳು, ವೀರಗಾಸೆಯೊಂದಿಗೆ ನಡೆಯಲಿದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹವಾಗಲಿಚ್ಚಿಸುವವರು ನಾಡಿದ್ದು ದಿನಾಂಕ 17ರೊಳಗಾಗಿ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಹೆಸರು ನೋಂದಾ ಯಿಸುವಂತೆ ದೇವಸ್ಥಾನದ ಕಾರ್ಯದರ್ಶಿ ಕೆ.ಪಿ. ಗಂಗಾಧರ್ ತಿಳಿಸಿದ್ದಾರೆ.
January 11, 2025