ರಾಣೇಬೆನ್ನೂರು ನಾಡಹಬ್ಬ ಕಾರ್ಯಕ್ರಮದಲ್ಲಿ ವಸಂತಾ ಹುಲ್ಲತ್ತಿ
ರಾಣೇಬೆನ್ನೂರು, ಅ.15- ಇಂದಿನ ಯುವ ಜನತೆಗೆ ನಮ್ಮ ಹಬ್ಬಗಳ ವೈಜ್ಞಾನಿಕ ಆಚರಣೆಯ ಹಿನ್ನೆಲೆ ಬಗ್ಗೆ ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ ಎಂದು ರಾಜ್ಯ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ಉಪಾಧ್ಯಕ್ಷರಾದ ವಸಂತಾ ಬಿ. ಹುಲ್ಲತ್ತಿ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಜರುಗಿದ 88ನೇ ವರ್ಷದ ನಾಡಹಬ್ಬದ ಎಂಟನೇ ದಿನದ ಸಭಾ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
`ಮನೆ ಗೆದ್ದು ಮಾರು ಗೆಲ್ಲು’ ಎಂಬಂತೆ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಮನೆಯ ಕೆಲಸಗಳನ್ನು ಪೂರೈಸಿ ಕೊಂಡು, ಮನೆಯ ಹೊರಗೂ ಕೆಲಸ ಮಾಡಲು ಅಭ್ಯಾಸ ಮಾಡಿಕೊಳ್ಳಿ ಎಂದು ಅವರು ಹೇಳಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಶಿವಪ್ಪ ಬಿ. ಗುರಿಕಾರ, ಮಿಮಿಕ್ರಿ ಕಲಾವಿದ ರಮೇಶ ಬಾಬು, ಹಾಸ್ಯ ಕಲಾವಿದ ಮಹಾದೇವಪ್ಪ ಸತ್ತಿಗೇರಿ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಮೈಸೂರಿನ ಅಂತರರಾಷ್ಟ್ರೀಯ ಖ್ಯಾತಿಯ ಮಿಮಿಕ್ರಿ ಕಲಾವಿದ ರಮೇಶಬಾಬು ಹಾಗೂ ಹುಬ್ಬಳ್ಳಿಯ ಹಾಸ್ಯ ಕಲಾವಿದ ಮಹಾದೇವಪ್ಪ ಸತ್ತೀಗೇರಿ ಅವರು ರಾಜಕಾರಣಿಗಳು, ಚಲನಚಿತ್ರ ನಟರ ಅನುಕರಣೆ, ಹಾಸ್ಯಚಟಾಕಿಗಳು ಹಾಗೂ ವಿವಿಧ ನಟರ ಖ್ಯಾತ ಸಿನೆಮಾ ಹಾಡುಗಳಿಗೆ ವೇದಿಕೆಯಲ್ಲಿಯೇ ಕ್ಷಣಾರ್ಧದಲ್ಲಿಯೇ ಆಯಾ ನಟರ ವೇಷ ಭೂಷಣಗೊಂದಿಗೆ ನ್ಯತ್ಯ ಮಾಡಿದ್ದು ವಿಶೇಷವಾಗಿತ್ತು
ದೇವಾಂಗ ಮಹಿಳಾ ಮಂಡಳಿಯ ಸದಸ್ಯರು ನಾಡಗೀತೆ ಹಾಡಿದರು, ವಿಭಾ ಜೋಶಿ ಸ್ವಾಗತಿಸಿದರು, ಶ್ರೀಮತಿ ನಾಡಿಗೇರ ವಂದಿಸಿದರು, ಶ್ರೀನಿಧಿ ಶಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿನಾಯಕ ಜೋಶಿ, ಸಂದೀಪ ರೂಪನಗುಡಿ, ಸತ್ಯನಾರಾಯಣ ವಿಶ್ವರೂಪ, ಸಂಕಪ್ಪ ಮಾರನಾಳ, ಕೆ. ಎನ್. ಷಣ್ಮುಖ, ಶ್ರೀನಿವಾಸ ಏಕಬೋಟೆ, ಮಹೇಶ ನಾಡಿಗೇರ, ಚಿದಂಬರ ಜೋಶಿ, ಸೀತಾರಾಮ ಕಣೇಕಲ್ ಮೊದಲಾದವರು ಉಪಸ್ಥಿತರಿದ್ದರು.