ಆಪೆ ಆಟೋ – ಮಜ್ಡಾ ವಾಹನ ಡಿಕ್ಕಿ; ಹಲವರಿಗೆ ಗಾಯ

ಆಪೆ ಆಟೋ – ಮಜ್ಡಾ ವಾಹನ ಡಿಕ್ಕಿ; ಹಲವರಿಗೆ ಗಾಯ

ಹರಿಹರ, ಅ.15- ನಗರದ   ತರಳಬಾಳು ಶಾಲೆ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಆಪೆ ಆಟೋ ಮತ್ತು ಇಟ್ಟಿಗೆ ತುಂಬಿರುವ ಮಜ್ಡಾ ವಾಹನಕ್ಕೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವರಿಗೆ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.

ಅಪಘಾತ ಸಂಭವಿಸಿದ ವೇಳೆ ಹಲವು ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಯಾಗಿದ್ದು, ಪ್ರಯಾಣಿಕರು ಪರದಾಡುವಂತೆ ಆತ್ತು. ಇದೇ ರಸ್ತೆಯಲ್ಲಿ ಕಳೆದ ಹದಿನೈದು ದಿನಗಳ ಕೆಳಗೆ ಬೈಕ್ ಮತ್ತು ಬಸ್‌ಗೆ ಡಿಕ್ಕಿ ಸಂಭವಿಸಿದ ಸಮಯದಲ್ಲಿ ಇದೇ ರೀತಿ ಪ್ರಯಾಣಿಕರು ಪರದಾಡಿದ್ದರು.  ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿರುವುದರಿಂದ ಸ್ಥಳದಲ್ಲಿ ಪದೇ ಪದೇ ಸಂಭವಿಸುವ ರಸ್ತೆ ಅಪಘಾತದಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಗ್ರಹಿಸಿದರು. ‌

error: Content is protected !!