ದಾವಣಗೆರೆ, ಅ.14- ನಗರದ ಕುವೆಂಪು ಕನ್ನಡ ಭವನದಲ್ಲಿ ನಾಳೆ ದಿನಾಂಕ 15ರ ಮಂಗಳವಾರ ಬೆಳಗ್ಗೆ 11.30ಕ್ಕೆ ಜೆ. ಕಲೀಮ್ ಬಾಷಾ ಅವರ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾ ದಿತವಾದ `ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್ಲಾ’ ಆತ್ಮ ಕಥೆ ಕೃತಿ ಲೋಕಾರ್ಪಣೆ ಆಗಲಿದೆ ಎಂದು ಪರಸ್ಪರ ಬಳಗದ ಹೆಚ್. ನಿಜಗುಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹರಿಹರ ತಾಲ್ಲೂಕು ಬಂ ಡಾಯ ಸಾಹಿತ್ಯ ಸಂಘಟನೆ, ಪರಸ್ಪರ ಬಳಗ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪುಸ್ತಕ ಲೋಕಾರ್ಪಣೆ ಹಾಗೂ ಕಾರ್ಯ ಕ್ರಮದ ಉದ್ಘಾಟನೆ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಜೆ. ಕಲೀಂ ಬಾಷಾ ಅನುವಾದಕರ ನುಡಿಗಳನ್ನಾ ಡುವರು. ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ವಿಶ್ರಾಂತ ಪ್ರಾಚಾರ್ಯರಾದ ಎಚ್.ಎ ಭಿಕ್ಷಾವರ್ತಿಮಠ, ಸಿ.ವಿ. ಪಾಟೀಲ್, ಆರ್.ಎಂ ಕುಬೇರಪ್ಪ, ಪ್ರಾಚಾರ್ಯ ಡಾ. ಮಂಜಣ್ಣ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಹಿರಿಯ ಸಾಹಿತಿ ಹೆಚ್.ಕೆ. ಕೊಟ್ರಪ್ಪ, ಜಿ. ಶಂಕರ್ ಮೂರ್ತಿ, ರಿಯಾಜ್ ಅಹಮದ್, ಆಸಿಫ್ ಬಾಷಾ ಸುದ್ದಿಗೋಷ್ಠಿಯಲ್ಲಿದ್ದರು.