ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ವಿದ್ಯಾರ್ಥಿಗಳಿಗೆ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್ ಕಿವಿಮಾತು
ಮಲೇಬೆನ್ನೂರು, ಅ.14- ವಿದ್ಯಾರ್ಥಿ ಜೀವ ನದಲ್ಲಿ ನೀವು ಕನಸು ಕಾಣದಿದ್ದರೆ, ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಗುರಿ ಮತ್ತು ಕನಸು ದೊಡ್ಡದಾಗಿರಲಿ ಎಂದು ದಾವಣಗೆರೆಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್ ಹೇಳಿದರು.
ಹನಗವಾಡಿ ಸಮೀಪದ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಡೆದ ಮಹಿಳಾ ಗ್ರಾಮ ಅಧಿಕಾರಿ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಸಮಯ ಪ್ರಜ್ಞೆ, ಆಸಕ್ತಿ ಬಹಳ ಮುಖ್ಯವಾಗಿದೆ. ಬುದ್ಧಿವಂತಿಕೆ ಮರದ ಕೊಂಬೆ ಆಗಿದ್ದರೆ, ಜ್ಞಾನ ದೊಡ್ಡ ಆಲದ ಮರವಿದ್ದಂತೆ ಎಂದು ಆಕಾಂಕ್ಷಿಗಳಿಗೆ ಅರ್ಥೈಸಿದ ಅವರು, ಗ್ರಾಮ ಅಧಿಕಾರಿಗಳ ಪರೀಕ್ಷೆಗೆ ಓದುತ್ತಿರುವ ನೀವು ಐ.ಎ.ಎಸ್., ಕೆ.ಎ.ಎಸ್. ಪರೀಕ್ಷೆಯನ್ನೂ ಬರೆಯಬಹುದೆಂದು ಹುರಿದುಂಬಿಸಿದರು.
ಇಂತಹ ಪರೀಕ್ಷೆಯಲ್ಲಿ ಫೇಲಾದರೆ ಬೇಜಾರ್ ಮಾಡಿಕೊಳ್ಳದೆ ಮತ್ತೆ ಮತ್ತೆ ಓದಿ ಪರೀಕ್ಷೆ ಬರೆ ಯಿರಿ, ಖಂಡಿತವಾಗಲೂ ನೀವು ಪಾಸ್ ಆಗು ತ್ತೀರಿ. ಅಧಿಕಾರ ಸಿಕ್ಕ ನಂತರ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಸಂಕಲ್ಪ ಮಾಡಿ ಎಂದು ಉದ್ಯೋಗ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಚಂದ್ರಪ್ಪ ಮಾತನಾಡಿ, ಕಠಿಣ ಪರಿಶ್ರಮದಿಂದ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರೂ ಆದ ಡಾ. ಎ. ಬಿ. ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ, ಪತ್ರಕರ್ತ ಜಿಗಳಿ ಪ್ರಕಾಶ್, ತರಬೇತಿ ಕಾರ್ಯಕ್ರಮದ ಮೇಲ್ವಿಚಾರಕ ಲೋಕಿಕೆರೆ ಅಂಜಿನಪ್ಪ, ಉಕ್ಕಡಗಾತ್ರಿ ಮಂಜುನಾಥ್, ವಾರ್ಡನ್ ಶಿಲ್ಪಾ, ಮ್ಯಾನೇಜರ್ ಮಂಜು, ವಾಹನ ಚಾಲಕ ಪವನ್, ಅಡುಗೆಯವ ರಾದ ರಾಹುಲ್ ನಿಂಗಪ್ಪ ಭಾಗವಹಿಸಿದ್ದರು.