ದಾವಣಗೆರೆ, ಅ.13- ಕಂದಾಯ ಮತ್ತು ಅರಣ್ಯದ ಅಂಚಿನ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ನಾಳೆ ದಿನಾಂಕ 14 ರಂದು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಎಐಕೆಕೆಎಂಎಸ್ ವತಿಯಿಂದ ಬಗರ್ ಹುಕ್ಕುಂ ಸಾಗುವಳಿದಾರರ ಅನಿರ್ದಿಷ್ಟ ಅವಧಿಯ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ಸುನೀತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕೂಡಲೇ ಭೂ ಮಂಜೂರಾತಿ ಸಮಿತಿ ರಚನೆಗೆ ಆದೇಶ ಹೊರಡಿಸಬೇಕು. ಈ ಸಮಿತಿ ಮುಖಾಂತರ ಬಾಕಿ ಇರುವ ಬಗರ್ ಹುಕ್ಕುಂ ಸಾಗುವಳಿದಾರರ ಅರ್ಜಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆಸಕ್ತರು ಜಗಳೂರು-ಚನ್ನಗಿರಿ (ಮಧು ತೊಗಲೇರಿ- 95355-10912), ದಾವಣಗೆರೆ- ನಾಗಸ್ಮಿತಾ (8431862199), ಹೊನ್ನಾಳಿ-ಹರಿಹರ (ಮಂಜುನಾಥ್ ರೆಡ್ಡಿ-8217544498) ಇವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ರಾಮಗೊಂಡನಹಳ್ಳಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.