ಹರಪನಹಳ್ಳಿ, ಅ.13- ತಾಲ್ಲೂಕಿನ ಅರಸೀಕೆರೆ ಗ್ರಾಮದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ ಚಂದ್ರಪ್ಪ ಅವರು ಇದೇ ದಿನಾಂಕ 8ರಂದು ಹೃದಯಘಾತದಿಂದ ನಿಧನರಾದರು. ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 300ಕ್ಕೂ ಹೆಚ್ಚು ದಂಡಿ ದುರುಗಮ್ಮ ದೇವಿ ನಾಟಕ ಪ್ರದರ್ಶನ ಮಾಡಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕರೂ ಆಗಿದ್ದರು.
ಪೂಜಾರ ಚಂದ್ರಪ್ಪ ನಿಧನಕ್ಕೆ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ, ಕಾಂಗ್ರೆಸ್ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ. ಕೆ.ಪಿ.ಪಾಲಯ್ಯ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವನಗೌಡ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮುಖಂಡರಾದ ಕೋಡಿಹಳ್ಳಿ ಭೀಮಪ್ಪ, ಹಲಗೇರಿ ಮಂಜುನಾಥ, ಪ್ರಶಾಂತ್ ಪಾಟೀಲ್, ರಾಮನಮಲಿ, ಇಸ್ಮಾಯಿಲ್ ಎಲಿಗಾರ್, ಮಾಲತೇಶ ಮರಿಗೌಡ, ಪೂಜಾರ ಮರಿಯಪ್ಪ, ಸಲಾಂ ಸಾಬ್, ಕಬ್ಬಳ್ಳಿ ಪರಸಪ್ಪ, ಶಿಕ್ಷಕ ಯರಬಳ್ಳಿ ಭೀಮಪ್ಪ, ಜೆ. ಪರಶುರಾಮ್, ಕೆ.ಮಹೇಶ್ ಸಂತಾಪ ಸೂಚಿಸಿದ್ದಾರೆ.