ದಾವಣಗೆರೆ,ಅ. 8 – ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಸಣ್ಣಕಥೆಯೊಂದು 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯವಾಗಿ ಆಯ್ಕೆಯಾಗಿದೆ.
ಪದವಿ ಕಾಲೇಜು ಅಧ್ಯಾಪಕರ ವೇದಿಕೆ ಮತ್ತು ಕುವೆಂಪು ವಿಶ್ವ ವಿದ್ಯಾಲಯ- ಪಠ್ಯ ಪುಸ್ತಕ ಮಾಲೆ ಯೋ ಜನೆಯ ಅಡಿಯಲ್ಲಿ ಪ್ರಧಾನ ಸಂಪಾದಕ ಪ್ರೊ. ಶಿವಾನಂದ ಕೆಳಗಿನಮನಿ ನೇತೃತ್ವದಲ್ಲಿ ವಿವಿಧ ಸೆಮಿಸ್ಟ್ರಗೆ ಪಠ್ಯಗಳನ್ನು ಆರಿಸಿದೆ.
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಈಗಾಗಲೇ ಬಿಡುಗಡೆ ಹೊಂದಿ ಜನಪ್ರಿಯ ಆಗಿರುವ `ಹಬ್ಬಿದಾ ಮಲೆ ಮಧ್ಯದೊಳಗೆ’ ಕಥಾ ಸಂಕಲನದ ಒಂದು ಕಥೆ ‘ ಇಪ್ಪತ್ತು ರುಪಾಯಿ’ ಗಣಕಸಿರಿ-1 ಬಿ.ಸಿ.ಎ ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆ ಪಠ್ಯಕ್ಕೆ ನಿಗದಿಪಡಿಸಲಾಗಿದೆ ಎಂದು ಸಂಪಾದಕ ಪ್ರೊ. ಎಚ್.ಎಸ್.ರಘುನಾಥ್ ಮತ್ತು ಡಾ. ಪ್ರವೀಣ್ ಚಂದ್ರ ತಿಳಿಸಿದ್ದಾರೆ.
ವೃದ್ಧಾಪ್ಯದ ಬದುಕು ಕೆಲವು ಜೀವಗಳಿಗೆ ಎಷ್ಟು ಘೋರ ಮತ್ತು ಭಾರ ಎಂಬುದನ್ನು ಈ ಕಥೆ ಸಾರುತ್ತದೆ. ಇಂದಿನ ಯುವ ಜನಾಂಗ ಹೆತ್ತವರ ಬಗ್ಗೆ ಇಟ್ಟುಕೊಳ್ಳಬಹುದಾದ ಮಾನವೀಯ ಅಂತಃಕರಣ ಕಲಿಕೆಗೆ ಇಂತಹ ಪಠ್ಯ ಸಹಕಾರಿ ಎಂದು ಪ್ರಧಾನ ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಒಂದು ಮಕ್ಕಳ ಕತೆ ಮಹಾರಾಷ್ಟ್ರದ ಪಠ್ಯ ಪುಸ್ತಕದಲ್ಲಿ ಮತ್ತು ದಾವಣಗೆರೆ ವಿಶ್ವ ವಿದ್ಯಾಲಯದ ಎರಡನೇ ಬಿಸಿಎ ಕನ್ನಡ ಪಠ್ಯ ಪುಸ್ತಕದಲ್ಲೂ ಕವಿತೆಯೊಂದು ಪಠ್ಯವಾಗಿದೆ.