ರಾಣೇಬೆನ್ನೂರು, ಅ.6- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಟೈಪಿಂಗ್ ಮತ್ತು ಸ್ಟೆನೋ ಫಲಿತಾಂಶ ಪ್ರಕಟವಾಗಿದ್ದು ರಾಣೇಬೆನ್ನೂರು ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಶೇ. 80ರಷ್ಟು ಉತ್ತೀರ್ಣರಾಗಿದ್ದಾರೆ.
ಐಶ್ವರ್ಯ ನಾಯಕ, ಪುಟ್ಟನಗೌಡ್ರ ಗುಲಗಂಜಿ, ಸಾಕಮ್ಮ ಹೂಲಿಹಳ್ಳಿ, ಪೂಜಾ ಹಿರೇಮಠ, ಅಭಿಷೇಕ ಲಮಾಣಿ, ಸಚಿನ ತುಮ್ಮಿನಕಟ್ಟಿ ಇಂಗ್ಲಿಷ್ ಟೈಪಿಂಗ್ ಪ್ರೌಢ ದರ್ಜೆಯಲ್ಲಿ ಪಾಸಾಗಿದ್ದಾರೆ. ಚೇತನ್ ಕುಮಾರ, ಸಂಗಿತ, ಮೇಘ, ರಾಹುಲ್, ವೀಣಾ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಅಭಿಷೇಕ ಲಮಾಣಿ, ಪವಿತ್ರಾ ಲಮಾಣಿ, ಮೇಘ, ಚೇತನಕುಮಾರ, ಸಂಗೀತ, ಯಶಸ್ವಿನಿ, ಮಾಲತೇಶ, ರಾಹುಲ್, ವಾಣಿಶ್ರೀ, ನಿರ್ಮಲ ಮತ್ತು ಮಮತ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಶೀಘ್ರ ಲಿಪಿಯಲ್ಲಿ ಚೈತ್ರಾ ಚೌಡಣ್ಣನವರ, ಕೆಂಪಣ್ಣ, ಚಂದಮ್ಮ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಶೀಘ್ರಲಿಪಿಯ ಪರೀಕ್ಷೆಯಲ್ಲಿ ಸಂಸ್ಥೆಯ ಏಳೂ ವಿದ್ಯಾರ್ಥಿಗಳು ಪಾಸಾಗಿದ್ದು, ಫಲಿತಾಂಶ ನೂರರಷ್ಟಾಗಿದೆ.