ದಾವಣಗೆರೆ, ಅ. 6 – ರಿದ್ಧಿ – ಸಿದ್ಧಿ ಫೌಂಡೇಶನ್ ಮತ್ತು ಆರ್. ಜೆ. ಇವೆಂಟ್ಸ್ ವತಿಯಿಂದ ರೇಣುಕಾ ಮಂದಿರದಲ್ಲಿ ಇಂದು ಸಂಜೆ ನಡೆದ ದಾಂಡಿಯ ನೈಟ್ ಕಾರ್ಯಕ್ರಮವನ್ನು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಕೈಗಾರಿಕೋದ್ಯಮಿ ಡಾ. ಅಥಣಿ ಎಸ್. ವೀರಣ್ಣ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜೆ. ಈಶ್ವರ ಸಿಂಗ್ ಕವಿತಾಳ್, ಶಿವಮೂರ್ತಿ ಸುರಭಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.