ದಾವಣಗೆರೆ, ಅ.4- ಮೈಕ್ರೋಬಿ ಫೌಂಡೇಶನ್ ವಾರ್ಷಿಕ ಮಹಾಸಭೆ ಇತ್ತೀಚಿಗೆ ಸಂಸ್ಥೆಯ ಅಧ್ಯಕ್ಷ ಬಿ.ಸಿ. ರುದ್ರೇಶ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಸಂಚಾಲಕ ದಿದ್ದಿಗಿ ಮಹದೇವಪ್ಪ ಅವರ ನೇತೃತ್ವದಲ್ಲಿ ನಡೆಯಿತು.
ಇದೇ ವೇಳೆ ಮಾತನಾಡಿದ ಮಹದೇವಪ್ಪ ಅವರು, ಇಂದಿನ ತೋಟಗಾರಿಕಾ ಕೃಷಿ ಎನ್ನುವುದು ಪ್ರಕೃತಿಗೆ ಪೂರಕ ವಾಗಿದ್ದರೆ, ಸುಸ್ಥಿರವಾಗಿದ್ದರೆ, ಸಮಗ್ರ ಬೆಳೆಗಳನ್ನು ಅಳವಡಿ ಸಿಕೊಂಡಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಅತಿಯಾದ ರಾಸಾಯನಿಕಗಳಿಂದ ನಮ್ಮ ರಾಜ್ಯದಲ್ಲಿ ಶೇ. 55 ರಷ್ಟು ಭೂಮಿ ಇಂದು ಬರಡಾಗಿದೆ. ಇದನ್ನು ಮರುಜೀವಗೊಳಿಸಲು ಕನಿಷ್ಠ ತ್ಯಾಜ್ಯಗಳನ್ನು ಮತ್ತು ಬೆಳೆಯ ಪಳೆಯುಳಿಕೆಗಳನ್ನು ಭೂತಾಯಿಗೆ ಸಮರ್ಪಿಸಿ, ಜೈವಿಕ ಕೃಷಿಗೆ ಹೆಚ್ಚಿನ ಒಲವು ತೋರಿಸಿ ಎಂದು ಹೇಳಿದರು.
ಇಂದಿನ ಕೃಷಿ ಪದ್ಧತಿಯಿಂದ ಮನುಷ್ಯನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಹೆದ್ನೆ ಮುರುಗೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧೇಶ್ ವಾರ್ಷಿಕ ವರದಿ ಮಂಡಿಸಿದರು.