ಒಳ್ಳೆಯ ಕಾರ್ಯಗಳಿಂದ ಬದುಕು ಸಮೃದ್ಧಿ

ಒಳ್ಳೆಯ ಕಾರ್ಯಗಳಿಂದ ಬದುಕು ಸಮೃದ್ಧಿ

ಯಲವಟ್ಟಿ : ಮಹಾಲಯ ಅಮವಾಸ್ಯೆ ಸತ್ಸಂಗದಲ್ಲಿ ಯೋಗಾನಂದಶ್ರೀ ಅಭಿಮತ

ಮಲೇಬೆನ್ನೂರು, ಅ. 4-  ಒಳ್ಳೆಯ ಕಾರ್ಯಗಳು ಹಾಗೂ ದಾನ, ಧರ್ಮಗಳಿಂದಾಗಿ ಬದುಕು ಸಮೃದ್ಧಿಗೊ ಳ್ಳುವುದರ ಜೊತೆಗೆ ಸಾರ್ಥಕತೆ ಪಡೆಯುತ್ತದೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಸಂಜೆ ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದಲ್ಲಿ ಮಹಾಲಯ ಅಮವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ನೀವು ನಿಮ್ಮ ಕಾಯಕದಲ್ಲೂ ಭಕ್ತಿ, ನಿಷ್ಠೆ ಬೆಳೆಸಿ ಕೊಳ್ಳಬೇಕು. ಬದುಕಿನಲ್ಲಿ ಎಲ್ಲರನ್ನೂ ಪ್ರೀತಿ, ಗೌರವ ದಿಂದ ಕಂಡಾಗ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಭಗವಂತನ ಜಪ, ತಪ ಮಾಡುವ ಮೂಲಕ ಅವನ ಪ್ರೀತಿಗೆ ಪಾತ್ರರಾಗಬೇಕು ಮತ್ತು ಮನೆಯ ಹಿರಿಯರ ಸ್ಮರಣೆ ಕೂಡಾ ಬದುಕಿಗೆ ದಾರಿದೀಪವಾಗುತ್ತದೆ ಎಂದ ಸ್ವಾಮೀಜಿ ಅವರು, ಪಿತೃಪಕ್ಷದ ಮಹತ್ವ ತಿಳಿಸಿದರು.

ಹಿರಿಯರಾದ ಕುಂಬಳೂರಿನ ಕೆ. ತೀರ್ಥಪ್ಪ, ನಿವೃತ್ತ ಶಿಕ್ಷಕ ಕೆ.ಎನ್. ಹಳ್ಳಿಯ ಹೆಚ್.ಎನ್.ತಿಪ್ಪೇಶ್ ಅವರು ಮಾತನಾಡಿ, ಇಂತಹ ಸತ್ಸಂಗ ಕಾರ್ಯಕ್ರಮ ಗಳು ಸಮಾಜದಲ್ಲಿ ಶಾಂತಿ, ಸಮಾನತೆಯ ಜೊತೆಗೆ ಬದುಕಿಗೆ ಸಂತೃಪ್ತಿ ತರುತ್ತವೆ ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಕುಂಬಳೂರಿನ ಶಂಕರಗೌಡ, ದೇವರಾಜ್, ಉಮಾಪತಿ , ಹೊಳೆಸಿರಿಗೆರೆಯ ಮಾಗೋಡ ಸಿದ್ದಪ್ಪ, ಕುಂದೂರು ಮಂಜಪ್ಪ, ಪತ್ರಕರ್ತ  ಜಿಗಳಿ ಪ್ರಕಾಶ್, ಕೆ.ಎಸ್. ಮಾಲತೇಶ್, ಮಂಜಪ್ಪ, ಯಲವಟ್ಟಿಯ ಹೊಸಮನಿ ಮಲ್ಲಪ್ಪ, ಎ. ಸುರೇಶ್, ಹೊರಟ್ಟಿ ಕರಿಬಸಪ್ಪ, ಕೆ. ಮಂಜಪ್ಪ, ಡಿ. ರಾಜಪ್ಪ, ಸುರೇಶ್ ಶ್ರೇಷ್ಠಿ, ಬಿ.ಜಿ. ಮಲ್ಲೇಶಪ್ಪ, ಎ. ಜಗದೀಶ್, ಕೆ. ನಿರಂಜನ್, ಮದಕರಿ ಮತ್ತಿತರರು ಭಾಗವಹಿಸಿದ್ದರು.

ಜಿಗಳಿ ಮತ್ತು ಯಲವಟ್ಟಿ ಭಜನಾ ಸಂಘದವರು ಭಜನೆ ಹಾಡುಗಳನ್ನು ಹಾಡಿದರು. ಕುಂಬಳೂರಿನ ಕೆ. ಕುಬೇರಪ್ಪ ಭಕ್ತಿಗೀತೆ ಹಾಡಿದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.

error: Content is protected !!