ಮಲೇಬೆನ್ನೂರು, ಅ. 3- ಇಲ್ಲಿನ ಪುರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ 18ನೇ ವಾರ್ಡ್ ಸದಸ್ಯ ಬಿ. ಮಂಜುನಾಥ್ ಅವರು ಗುರುವಾರ ನಡೆದ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ, ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಸ್ಥಾಯಿ ಸಮಿತಿ ನೂತನ ಸದಸ್ಯರಾದ ಕೆ.ಜಿ.ಲೋಕೇಶ್, ಗೌಡ್ರ ಮಂಜಣ್ಣ, ನಯಾಜ್, ದಾದಾಪೀರ್, ಭೋವಿ ಶಿವು ಅವರುಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿ, ಮಾತನಾಡಿದರು.
ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಬಿ. ಮಂಜುನಾಥ್ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಮತ್ತು ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ. ವಾಗೀಶ್‌ಸ್ವಾಮಿ ಅವರಿಗೆ ಆಭಾರಿಯಾಗಿದ್ದೇನೆ. ಪುರಸಭೆಯ ನೂತನ ಕಛೇರಿ ಸಂಕೀರ್ಣ ನಿರ್ಮಾಣಕ್ಕಾಗಿ ನೀರಾವರಿ ಇಲಾಖೆ ಆವರಣದಲ್ಲಿ ಜಾಗ ನೀಡುವ ವಿಚಾರ ಹಾಗೂ ಪುರಸಭೆಗೆ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸಲು ಶೀಘ್ರ ಬೆಂಗಳೂರಿಗೆ ನಿಯೋಗ ಹೋಗುವುದಾಗಿ ಮಂಜುನಾಥ್ ತಿಳಿಸಿದರು.
ಸ್ಥಾಯಿ ಸಮಿತಿ ಸದಸ್ಯರಾದ ಖಲೀಲ್, ಶಬ್ಬೀರ್ ಖಾನ್, ಕಛೇರಿ ವ್ಯವಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿ, ಆರೋಗ್ಯ ನಿರೀಕ್ಷಕರಾದ ನವೀನ್, ಅವಿನಾಶ್ ಈ ವೇಳೆ ಹಾಜರಿದ್ದರು.
ಸಭೆಯ ನಂತರ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರನ್ನು ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಎ. ಆರೀಫ್ ಅಲಿ, ಷಾ ಅಬ್ರಾರ್, ಬಸವರಾಜ್ ದೊಡ್ಮನಿ, ಎಕ್ಕೆಗೊಂದಿ ಕರಿಯಪ್ಪ, ಮಾಜಿ ಸದಸ್ಯರಾದ ಭಾನುವಳ್ಳಿ ಸುರೇಶ್, ಸುಬ್ಬಿ ರಾಜಣ್ಣ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಮುಖಂಡರಾದ ಕೆ.ಪಿ. ಗಂಗಾಧರ್, ಎಂ.ಬಿ. ರುಸ್ತುಂ, ಚಮನ್ ಷಾ, ಬಿ. ಚಂದ್ರಪ್ಪ, ಪಿ.ಆರ್. ಕುಮಾರ್, ಯೂನೂಸ್, ಪಿ.ಹೆಚ್. ಶಿವಕುಮಾರ್, ಕಡ್ಲೆಗೊಂದಿ ಕೇಶವ, ಎ.ಕೆ. ನಾಗರಾಜ್, ಲಿಂಗರಾಜ್, ಯುವರಾಜ್, ಜಿಗಳೇರ ಮಧು, ಭಾನುವಳ್ಳಿ ಬಸವರಾಜ್, ಮೆಡಿಕಲ್ ಶಾಪ್ ರಾಜೀವ್, ಕುಂಬಳೂರು ಶರಣ್ ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದರು.