ಹುಚ್ಚು ನಾಯಿ ಕಡಿತಕ್ಕೆ ವೈದ್ಯರ ಸಲಹೆ

ಹುಚ್ಚು ನಾಯಿ ಕಡಿತಕ್ಕೆ ವೈದ್ಯರ ಸಲಹೆ

ಮಲೇಬೆನ್ನೂರು, ಸೆ. 30 – ಹುಚ್ಚುನಾಯಿ ಕಡಿತದಿಂದ ಬರುವ ರೋಗವನ್ನು ರೇಬಿಸ್ ರೋಗ ಎಂದು ಕರೆಯುತ್ತಾರೆ ಎಂದು ಟಿ.ಹೆಚ್.ಓ ಡಾ. ಅಬ್ದುಲ್ ಖಾದರ್ ಹೇಳಿದರು.

ಅವರು ಸೋಮವಾರ ಕುಂಬಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾತನಾಡಿದರು. 

ವಿಶ್ವದಲ್ಲಿಯೇ ನಾಯಿ ಕಡಿತಕ್ಕೆ ಭಾರತ ದೇಶವು ಮೂರನೆಯ ಒಂದು ಪಾಲನ್ನು ಪಡೆದಿದೆ. ನಮ್ಮ ದೇಶದಲ್ಲಿ ಸಾಕು ನಾಯಿಗಳಿಗಿಂತ ಬೀದಿ ನಾಯಿಗಳ ಸಂಖ್ಯೆಗಳು ಹೆಚ್ಚಾಗಿರುವುದರಿಂದ ವಿಶ್ವದಲ್ಲಿ ಮೂರು ಜನ ಹುಚ್ಚುನಾಯಿ ಕಡಿತದಿಂದ ಸಾವನ್ನಪ್ಪಿದರೆ ಭಾರತ ಪಾಲು ಮೂರರಲ್ಲಿ ಒಬ್ಬರು ಎಂದರು. 

ಯಾವುದೇ ನಾಯಿ ಕಡಿದರೂ ನಿರ್ಲಕ್ಷ್ಯ ಮಾಡದೇ 15 ನಿಮಿಷಗಳವರೆಗೆ ನಾಯಿ ಕಚ್ಚಿದ ಜಾಗವನ್ನು ನೀರಿನಿಂದ ತೊಳೆಯಬೇಕು. ಆಗ 90 ಪರ್ಸೆಂಟ್ ರೇಬಿಸ್ ವೈರಸ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ನಾಯಿ ಕಡಿತಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ಇದೆ ಎಂದು ಡಾ. ಖಾದರ್ ಹೇಳಿದರು. 

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮಣ್ಣ ಮಾತನಾಡಿ, ಸಾಕು ಪ್ರಾಣಿಗಳ ಮಾಲೀಕರು ರೇಬೀಸ್ ಲಸಿಕೆಗಳಲ್ಲಿ ಸಾಕು ಪ್ರಾಣಿಗಳನ್ನು ನವೀಕೃತವಾಗಿರಿಸುವುದರ ಮೂಲಕ ತಮ್ಮ ಅಪಾಯವನ್ನು ಕಡಿಮೆ ಮಾಡಬಹುದು ಅಲ್ಲದೆ, ನಿಮ್ಮ ಸಾಕು ಪ್ರಾಣಿಗಳನ್ನು ಕಾಡು ಪ್ರಾಣಿಗಳಿಂದ ಮತ್ತು ಪರಿಚಯವಿಲ್ಲದ ಸಾಕು ಪ್ರಾಣಿಗಳಿಂದ ಸಾಧ್ಯವಾದಷ್ಟು ದೂರವಿಡಿ ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಫ್ರೀ. ಎಕ್ಸ್ಪೋಸರ್ ಹಾಗೂ ಪೋಸ್ಟ್ ಎಕ್ಸ್ಪೋಸರ್ ವಿಷಯ ಕುರಿತು ಮಾತನಾಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹನುಮಂತಯ್ಯ ವಹಿಸಿಕೊಂಡಿದ್ದರು. ಉಪ ಪ್ರಾಂಶುಪಾಲ ಗೋವಿಂದಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶ್ವಿನ್ ಬಾನು ಹಾಗೂ ಆಶಾ ಕಾರ್ಯಕರ್ತೆಯರು ಈ ವೇಳೆ ಉಪಸ್ಥಿತರಿದ್ದರು.  ಇತಿಹಾಸ ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!