ಬಿಐಇಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಡಾ.ಸುರೇಂದ್ರನಾಥ್ ನಿಶಾನಿಮಠ
ದಾವಣಗೆರೆ, ಸೆ. 30- ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಚನ್ನಾಗಿ ಇಂಗ್ಲಿಷ್ ಮಾತನಾಡುವುದನ್ನು ಕಲಿಯಬೇಕು. ಕಲಿಕೆಗೆ ಬೇಕಾದ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು. ಆಧುನಿಕ ಕಲಿಕಾ ಮನೋಬಲವನ್ನು ಹೆಚ್ಚಿಸಿಕೊಂಡಾಗ ಮಾತ್ರ ಬದಲಾಗುತ್ತಿರುವ ಪ್ರಪಂಚಕ್ಕೆ ಸವಾಲನ್ನು ಒಡ್ಡಬಹುದು ಎಂದು ಸುವೇದ ಎಜುಕೇಶನ್ ಮತ್ತು ರಿಸರ್ಚ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಸುರೇಂದ್ರನಾಥ್ ಪಿ. ನಿಶಾನಿಮಠ ಹೇಳಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ (ಒಳಾಂಗಣ ಸಭಾಂಗಣ) ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿಕಸನ ಶಿಬಿರದ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಕಲಿಕೆಗೆ ತೆರೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತ ನಾಡಿ, ವಿದ್ಯಾರ್ಥಿಗಳು ಪಠ್ಯಕ್ರ ಮದ ಜೊತೆಗೆ ಇತರೆ ಚಟುವ ಟಿಕೆಗಳಿಗೆ ತಮ್ಮನ್ನು ತಾವು ತೊಡಗಿ ಸಿಕೊಳ್ಳಬೇಕು. ಹಾಗಾದರೆ ಮಾತ್ರ ನಿಮ್ಮ ಸಂಪೂರ್ಣ ಏಳಿಗೆ ಸಾಧ್ಯ ಎಂದರು.
ಸಂಚಾಲಕ ಡಾ.ಎನ್.ಎಸ್. ಬಸವರಾಜಪ್ಪ ಕಾರ್ಯಾಗಾರದ ಮಹತ್ವ ತಿಳಿಸಿದರು. ಪ್ರಾಚಾರ್ಯ ಡಾ.ಹೆಚ್.ಬಿ. ಅರವಿಂದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.
ಡಾ. ಅಶ್ವಿನಿ ರಾವ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಮಾಳವಿಕಾ ಮತ್ತು ಪ್ರೊ. ಜಿ.ಎಸ್. ಪಲ್ಲವಿ ನಿರೂಪಿಸಿದರು.