ಕೆಇಎ ಪರೀಕ್ಷೆ ವಂಚಿತರಾದ ಅಭ್ಯರ್ಥಿಗಳು
ಜಗಳೂರು, ಸೆ.29- ಪಟ್ಟಣದ ಸರ್ಕಾರಿ ಪಿಯುಸಿ ಕಾಲೇಜು ಮುಂಭಾಗ ಭಾನುವಾರ ಗ್ರಾಮ ಆಡಳಿತ ಅಧಿಕಾರಿಗಳ ಆಯ್ಕೆಗೆ ನಡೆದ ಕನ್ನಡ ಕಡ್ಡಾಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಇಎ ಪ್ರವೇಶ ಪತ್ರದಲ್ಲಿ ಮಾಡಿದ ಪರೀಕ್ಷಾ ಕೇಂದ್ರ ವಿಳಾಸದ ಎಡವಟ್ಟಿನಿಂದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳು ಕಂಗಾಲಾಗಿ ಪರೀಕ್ಷಾ ಕೇಂದ್ರ ಹುಡುಕಾಟದಲ್ಲಿಯೇ ಸಮಯ ಕಳೆದು ಪರೀಕ್ಷೆಯಿಂದ ವಂಚಿತರಾಗಿ ಅಳಲು ತೋಡಿಕೊಂಡರು.
ಕೆಇಎ ಪರೀಕ್ಷೆಗೆ 268 ಅಭ್ಯರ್ಥಿಗಳು ಗೈರು
ಜಗಳೂರು, ಸೆ.29- ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಹುದ್ದೆಗೆ ಇಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 504 ಅಭ್ಯರ್ಥಿಗಳು ನೊಂದಣಿಯಾಗಿದ್ದು, 405 ಅಭ್ಯರ್ಥಿಗಳು ಹಾಜರಾಗಿದ್ದರು. 99 ಜನ ಅಭ್ಯರ್ಥಿಗಳು ಗೈರಾಗಿದ್ದಾರೆ
ನಾಲಂದ ಪದವಿಪೂರ್ವ ಕಾಲೇಜಿನಲ್ಲಿ ನೋಂದಣಿಯಾದ 600 ಅಭ್ಯರ್ಥಿಗಳ ಪೈಕಿ 106 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮಾಲತಿ ಪದವಿಪೂರ್ವ ಕಾಲೇಜಿನಲ್ಲಿ 313 ನೊಂದಣಿ ಅಭ್ಯರ್ಥಿಗಳಲ್ಲಿ 249 ಅಭ್ಯರ್ಥಿಗಳು ಹಾಜರಾಗಿದ್ದು, 63 ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಬಿಇಓ ಹಾಲಮೂರ್ತಿ ಹಾಗೂ ಬಿಆರ್ ಸಿ ಡಿಡಿ ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಕೊಠಡಿಗಳಲ್ಲಿಯೂ ಸಿಸಿ ಕ್ಯಾಮೇರಾ ಕಣ್ಗಾವಲು ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲೂ ಪೋಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪರೀಕ್ಷೆಯಿಂದ ವಂಚಿತರಾದ ಹರಿಹರ ತಾಲ್ಲೂಕಿನ ಭಾನುವಳ್ಳಿ ಮತ್ತು ಮಲೇಬೆನ್ನೂರು ಸಮೀಪದ ಆದಾಪುರ ಗ್ರಾಮದ ಲಕ್ಷ್ಮಿ ಮತ್ತು ಗ್ರಾಮದ ರಾಜೇಶ್ವರಿ ಪ್ರವೇಶ ಪತ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಜಗಳೂರು, ಇಇಬಿ ವೃತ್ತ, ದಾವಣಗೆರೆ ಜಗಳೂರು ಎಂಬ ವಿಳಾಸದ ಗೊಂದಲದಲ್ಲಿ ದಾವಣಗೆರೆಯಲ್ಲಿ ಪರೀಕ್ಷಾ ಕೇಂದ್ರ ಹುಡುಕಾಟ ನಡೆಸಿ ನಂತರ ಜಗಳೂರಿಗೆ 10.30 ಸಮಯದ ನಂತರ ಆಗಮಿಸಿದಾಗ ಪರೀಕ್ಷಾ ಕೇಂದ್ರಕ್ಕೆ ಪ್ರವೇಶದ ಸಮಯ ಮುಕ್ತಾಯವಾಗಿದ್ದರಿಂದ ಪರೀಕ್ಷೆಯಿಂದ ಹೊರಗುಳಿಯಬೇಕಾಯಿತು.
ಕೆಇಎ ಅವರು ಪ್ರವೇಶ ಪತ್ರದಲ್ಲಿ ಸರಿಯಾದ ವಿಳಾಸವನ್ನು ಅಭ್ಯರ್ಥಿಗಳಿಗೆ ನೀಡದೇ ಇರುವುದರಿಂದ ಪರೀಕ್ಷೆಯಿಂದ ವಂಚಿತರಾದರು ಎಂದು ಅಭ್ಯರ್ಥಿಗಳು ಆರೋಪಿಸಿದರು.