ದಾವಣಗೆರೆ, ಸೆ.29- ರೈಲುಗಳಿಗೆ ಕಲ್ಲು ಎಸೆಯುವುದು, ರೈಲ್ವೆ ಹಳಿಯ ಮೇಲೆ ಕಲ್ಲು ಅಥವಾ ಬೇರೆ ವಸ್ತುಗಳನ್ನು ಇಡುವುದು ತಪ್ಪು ಎಂದು ರೈಲ್ವೇ ರಕ್ಷಣಾ ದಳದ ಇನ್ಸ್ಪೆಕ್ಟರ್ ಬಿ.ಎನ್.ಕುಬೇರಪ್ಪ ತಿಳಿಸಿದರು.
ಶ್ರೀರಾಮನಗರದಲ್ಲಿರುವ ಎಸ್.ಓ.ಜಿ ಕಾಲೋನಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರೈಲ್ವೆ ಸುರಕ್ಷಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಎಲ್ಲಿ ಬೇಕೆಂದರಲ್ಲಿ ಹಳಿ ದಾಟುವುದು, ಇಂತಹ ಕೃತ್ಯಗಳಿಂದ ಜೀವ ಮತ್ತು ಆಸ್ತಿಯ ಹಾನಿಯಾಗುತ್ತದಲ್ಲದೇ, ರೈಲ್ವೆ ಅಧಿನಿಯಮ 2003 ರ ಪ್ರಕಾರ ದಂಡನೀಯ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ಪಿಎಸ್ಐ ಲಕ್ಷ್ಮವ್ವ ಎನ್. ಪಾಟೀಲ್, ಮತ್ತು ಸಿಬ್ಬಂದಿಗಳು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸತ್ಯವತಿ, ಮುಖಂಡರಾದ ಕಲ್ಲೇಶಪ್ಪ, ಬಾತಿ ಶಿವಕುಮಾರ್, ಆಂಜಿನಪ್ಪ, ಎಲ್ ಜಯಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.