15 ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ್ರು
ಹರಿಹರ, ಸೆ. 29- ಕಿತ್ತೂರು ರಾಣಿ ಚೆನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘವು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ್ರು ಹೇಳಿದರು.
ನಗರದ ಕದಂಬ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸಂಘದ 15 ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಾಲಿನಲ್ಲಿ 37 ಲಕ್ಷ ರೂಪಾಯಿ ವಹಿವಾಟು ನಡೆಸಿದೆ. ಸಾಲವನ್ನು ಪಡೆದವರು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದ್ದರಿಂದ ಸೊಸೈಟಿ ಪ್ರಗತಿಯ ಹಾದಿಯಲ್ಲಿ ಸಾಗಿರುತ್ತದೆ. ಎಂದರು. ಕಾರ್ಯದರ್ಶಿ ಎನ್.ಎಸ್. ನಾಗರಾಜ್ ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ
ಜಿ. ಬಸವನಗೌಡ, ಯಶೋಧಮ್ಮ, ಹೆಚ್. ರಾಮಪ್ಪ, ಸಲಳ್ಳಿ ಕೊಟ್ರಪ್ಪ, ಗಣ್ಯರಾದ ಸೈಯದ್ ಪಾಪಮಯ್ಯ, ನಿಂಗಪ್ಪ, ಶಿವಕುಮಾರ್, ಬಸವರಾಜ್, ಜಿ. ನೀಲನಗೌಡ, ಹೆಚ್. ನಿಂಗಪ್ಪ, ಶಿವಕುಮಾರ್, ಮಂಜುನಾಥ್ ಇತರರು ಹಾಜರಿದ್ದರು.