ಚಿತ್ರದುರ್ಗ, ಸೆ. 27 – ಜಿಲ್ಲೆಯ ಕೂನಬೇವು ಗ್ರಾಮದ ಕೆ.ಸಿ. ಶಿವಾನಂದಪ್ಪ ಇವರ ಪುತ್ರ ಡಾ. ಕೆ. ಗಣೇಶ್ ಕುಮಾರ್ ಇವರು ಗಣಿತಶಾಸ್ತ್ರ ವಿಭಾಗದಲ್ಲಿ ಸತತ ಐದು ಬಾರಿಗೆ (2020, 2021, 2022, 2023 ಮತ್ತು 2024) ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯ ಹೊರ ತಂದಿರುವ ವಿಶ್ವದ ಟಾಪ್ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ 33660ನೇ ಸ್ಥಾನ ಪಡೆದಿರುವುದರ ಜೊತೆಗೆ ಜೀವಮಾನದ ಶ್ರೇಷ್ಠ ಸಾಧನೆಯ ಪಟ್ಟಿಯಲ್ಲಿಯೂ ಸಹ ಆಯ್ಕೆಯಾಗಿರುತ್ತಾರೆ.
ಗಣೇಶ್ ಅವರು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜೆ. ಲೋಕೇಶ್ ಇವರ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಯೂ ಉಪನ್ಯಾಸಕರಾಗಿದ್ದರು.