ಮಲೇಬೆನ್ನೂರು, ಸೆ. 27 – ಇಲ್ಲಿನ ಪಿ.ಡಬ್ಲ್ಯೂ.ಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ನ ಶ್ರೀಮತಿ ಅರುಣಾ ದಿವಾಕರ ಅವರ ನೆರವಿನಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಉಪಕರಣಗಳನ್ನು ವಿತರಿಸಲಾಯಿತು.
ಅರುಣಾ ದಿವಾಕರ್ ಅವರು ಮಾತನಾಡಿ, ಮಕ್ಕಳು ಪ್ರಶ್ನೆ ಕೇಳುವ ಮನೋಭಾವನೆಯನ್ನ ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಜ್ಞಾನ ವೃದ್ದಿಯನ್ನು ಮಾಡಿಕೊಳ್ಳಬೇಕು ಎಂದು ಹೇಳುವುದರ ಜೊತೆಗೆ ನಾವು ನೀಡಿರುವ ವಿಜ್ಞಾನ ಉಪಕರಣಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಕುಂಬಳೂರಿನ ಸಿಆರ್‌ಪಿ ನಂಜುಡಪ್ಪ ಮಾತನಾಡಿ, ಮಕ್ಕಳು ದಾನಿಗಳು ನೀಡುವ ಸೌಲಭ್ಯಗಳನ್ನ ಸಮರ್ಪಕವಾಗಿ ಬಳಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹೆಗಡೆ ಮಾತನಾಡಿದರು.
ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಸಿದ್ದಮ್ಮ ದಾನಿಗಳಿಂದ ಪಡೆದ ಉಪಕರಣ ಉಪಯೋಗಿಸಿ ಮಕ್ಕಳಿಂದ ಪ್ರಯೋಗ ಮಾಡಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ಕುಮಾರ, ಎಸ್‌ಡಿ.ಎಂ.ಸಿ ಪದಾದಿಕಾರಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕರಿಬಸಪ್ಪ ಬಸಲಿ, ಸತೀಶ್
ಕುಮಾರ, ಚನ್ನಕೇಶವ ಕಟ್ಟಿ, ಶಿಕ್ಷಕರಾದ ಪೀರುನಾಯ್ಕ, ರಾಘವೇಂದ್ರ, ಮಲ್ಲಿಕಾರ್ಜುನ, ಶಶಿಕುಮಾರ, ಉಷಾ, ಪ್ರೇಮಕುಮಾರಿ ಹಾಜರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ನೇತ್ರಾವತಿ ನಿರೂಪಿಸಿದರೆ ಶ್ರೀಮತಿ ಸುನೀತಾ ಸ್ವಾಗತಿಸಿದರು.