ಹರಿಹರದ ಜಿಬಿಎಂಎಸ್ ಶಾಲೆಗೆ ಎಇಇ ಭೇಟಿ : ಆಹಾರ ಗುಣಮಟ್ಟ ಪರಿಶೀಲನೆ

ಹರಿಹರದ ಜಿಬಿಎಂಎಸ್ ಶಾಲೆಗೆ ಎಇಇ ಭೇಟಿ :   ಆಹಾರ ಗುಣಮಟ್ಟ ಪರಿಶೀಲನೆ

ಹರಿಹರ, ಸೆ. 27- ನಗರದ ಗಾಂಧಿ ಮೈದಾನದ ಪಕ್ಕದಲ್ಲಿರುವ ಜಿ.ಬಿ.ಎಂ.ಎಸ್. ಮಹಿಳಾ ಪ್ರೌಢಶಾಲೆಗೆ ಅಕ್ಷರ ದಾಸೋಹ ಇಲಾಖೆಯ ಎಇಇ ವೀರೇಶ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು,   ಬಡವರ ಮಕ್ಕಳೇ ಹೆಚ್ಚಾಗಿ ಓದುವ ಈ ಶಾಲೆಯಲ್ಲಿ, ಶಿಸ್ತು ಬದ್ಧ ಶಿಕ್ಷಣದ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ವಿತರಣೆ ಮಾಡಿದಾಗ ಮಕ್ಕಳಲ್ಲಿ ಓದುವುದಕ್ಕೆ ಹೆಚ್ಚು ಆಸಕ್ತಿ ಬರುತ್ತದೆ ಎಂದರು.  ಆಹಾರದಲ್ಲಿ ತರಕಾರಿ ಹಾಗೂ ಎಣ್ಣೆ ಅಂಶ ಕಡಿಮೆ ಇರುವುದು ಕಂಡು ಬಂದಿದ್ದು, ಅದನ್ನು ಸರಿ ಪಡಿಸಿಕೊಳ್ಳುವಂತೆ   ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಒಂದು ವೇಳೆ ಮುಂದೆ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ  ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪೈಯಾಜ್ ಆಹ್ಮದ್,  ಶಿಕ್ಷಕರಾದ ನಾಗರಾಜ್, ಲಕ್ಷ್ಮಣ್, ಸವಿತಾ ಮಾಲಮ್ಮ, ಸಂತೋಷ, ಸುಧಾ, ನಾಗಮ್ಮ, ಜ್ಯೋತಿ, ಅಕ್ಷರ ದಾಸೋಹ ಇಲಾಖೆಯ ವೆಂಕಟೇಶ್ ಇತರರು ಹಾಜರಿದ್ದರು.

error: Content is protected !!