ಹರಿಹರ, ಸೆ. 27- ಸರ್ಕಾರಿ ನೌಕರರಿಗೆ ಮಾರಕವಾಗಿರುವ ಎನ್ಪಿಎಸ್ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಎನ್ಪಿಎಸ್ ಘಟಕದ ಪದಾಧಿಕಾರಿ ಗಳು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಚುನಾವಣೆ ಪೂರ್ವ ರಾಜಕೀಯ ಪಕ್ಷಗಳು ಒಪಿಎಸ್ ಜಾರಿಗೊಳಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದರೂ ಕೇವಲ ಸಮಿತಿ ರಚನೆ ಆಗಿದೆಯೇ ಹೊರತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.
ರಾಜ್ಯ ಮತ್ತು ರಾಷ್ಟ-ಮಟ್ಟದಲ್ಲಿ ಎನ್ಪಿಎಸ್ ನೌಕರರ ಸಂಘಟನೆಗಳು ಹಳೆ ಪಿಂಚಣಿ ಯೋಜನೆ ಜಾರಿಗೆ ಹೋರಾಟ ನಡೆಸಿದ ಫಲವಾಗಿ ಕೇಂದ್ರ ಸರ್ಕಾರವು ಎನ್ಪಿಎಸ್ ಬದಲಾಗಿ ಯುಪಿಎಸ್ ಜಾರಿಗೆ ತೀರ್ಮಾನಿಸಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್ಪಿಎಸ್ ಮತ್ತು ಯುಪಿಎಸ್ ಹಿಂಪಡೆದು ಮೊದಲಿನಂತೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ್, ತಾಲ್ಲೂಕು ಕಾರ್ಯದರ್ಶಿ ಎ.ಸಿ. ಶಿವರಾಜ, ಗ್ರಂಥಾಲಯ ಇಲಾಖೆಯ ರವಿಕುಮಾರ್, ತಾಲ್ಲೂಕಿನ ಎನ್ಪಿಎಸ್ ನೌಕರರು ಇದ್ದರು.