ಮಲೇಬೆನ್ನೂರು, ಸೆ.26 – ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ 2024ರ ವಕ್ಫ್ ಮಸೂದೆಯನ್ನು ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಮಲೇಬೆನ್ನೂರಿನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹಜರತ್ ಸೈಯ್ಯದ್ ಹಬೀಬುಲ್ಲ ಷಾ ಖಾದ್ರಿ ಅವರ ದರ್ಗಾ ಮೈದಾನದಿಂದ ನಾಡ ಕಛೇರಿವರೆಗೆ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರು, ನಂತರ ಉಪ ತಹಶೀಲ್ದಾರ್ ಆರ್.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯ ನೇತೃತ ವಹಿಸಿ ಮಾತನಾಡಿದ ಪುರಸಭೆ ಸದಸ್ಯ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಬೀರ್ ಅಲಿ, ಕೇಂದ್ರದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ
ವಿರೋಧಿ ಮಸೂದೆಯನ್ನು ಜಾರಿಗೆ ತರಲು ಹೊರಟಿದ್ದು, ಇದು ವಕ್ಫ್ ಆಸ್ತಿಯನ್ನು ಕಬಳಿಸುವ ಮತ್ತು ಬೇಕಾದವರಿಗೆ ಮಾರಾಟ ಮಾಡಿಕೊಳ್ಳಬ ಹುದಾದ ಕಾನೂನುಗಳನ್ನು ಮಾಡಲು ಹೊರಟಿದೆ ಎಂದು ಹರಿಹಾಯ್ದರು. ಈ ಮಸೂದೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಖಲೀಲ್, ನಯಾಜ್, ಬುಡ್ಡವರ್ ರಫೀಕ್, ಎಂ.ಬಿ.ರುಸ್ತುಮ್, ದಾದಾಪೀರ್, ಷಾ ಅಬ್ರಾರ್, ಎ.ಆರೀಫ್ ಅಲಿ, ಯೂಸುಫ್ ಖಾನ್, ಮುಖಂಡರಾದ ಸೈಯ್ಯದ್ ಜಾಕೀರ್, ಬುಡ್ಡವರ್ ಸೈಫುಲ್ಲಾ, ದಾದವಲಿ, ಸುಲ್ತಾನ್ ಹುಸೈನ್, ಶಾಬಾಜ್, ಶಫಿಉಲ್ಲಾ, ಹಬೀಬುಲ್ಲಾ, ಅಯೂಬ್ ಖಾನ್ ಇನ್ನೂ ಮುಂತಾದವರು ಭಾಗವಹಿಸಿದ್ದರು.