ಬೆಂಗಳೂರು, ಸೆ. 26 – ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ `ಜನತಾವಾಣಿ’ ಉಪ ಸಂಪಾದಕ ಇ.ಎಂ. ಮಂಜುನಾಥ ಸೇರಿದಂತೆ ಹನ್ನೊಂದು ಜನರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಇಂದು ಆದೇಶ ಹೊರಡಿಸಿದೆ.
ರಾಜ್ಯಪಾಲರ ಆದೇಶಾನುಸಾರ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಜೆಸಿಂತ ಅವರು ಆದೇಶ ಮಾಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ವಿಜಯಪುರದ ವಿಜಯ ಕರ್ನಾಟಕ ವರದಿಗಾರ ಸಂಗಮೇಶ ಚೂರಿ, ಸುವರ್ಣ ಟಿವಿ ಇನ್ಫುಟ್ ಮುಖ್ಯಸ್ಥರಾದ ಎಂ.ಸಿ. ಶೋಭಾ (ಬೆಂಗಳೂರು), ಹುಬ್ಬಳ್ಳಿ ಹಿರಿಯ ಪತ್ರಕರ್ತ ಜೆ. ಅಬ್ಬಾಸ್ಮುಲ್ಲಾ ಅವರುಗಳು ನೇಮಕ ಗೊಂಡಿದ್ದಾರೆ.
ಹೆಚ್.ವಿ. ಕಿರಣ್, (ಟಿವಿ 9), ಅನಿಲ್ ವಿ. ಗೆಜ್ಜಿ (ಟೈಮ್ ಆಫ್ ಇಂಡಿಯಾ), ಕೆಂಚೇಗೌಡ (ವಿಜಯ ಕರ್ನಾಟಕ) ಯು. ಸುರೇಂದ್ರ ಶೆಣೈ (ಕನ್ನಡಪ್ರಭ, ಕುಂದಾಪುರ), ರವಿ ಕೋಟಿ (ಆಂದೋಲನ, ಮೈಸೂರು), ಎಸ್. ರಶ್ಮಿ (ಬೆಂಗಳೂರು) ಸದಸ್ಯರಾಗಿರುವ ಇತರರು.
ಅಲ್ಲದೇ, ದಾವಣಗೆರೆ, ಮೈಸೂರು, ಮಂಗಳೂರು ವಿಶ್ವವಿದ್ಯಾನಿಲಯಗಳ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಆಕಾಶವಾಣಿ ನಿರ್ದೇಶಕರು, ವಾರ್ತಾ ಇಲಾಖೆ ಆಯುಕ್ತರು, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಅವರನ್ನು ಪದನಿಮಿತ್ತ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ.