ಪ್ರಗತಿಯತ್ತ ದಾಪುಗಾಲಿಡುತ್ತಿರುವ ಸಂತೃಪ್ತಿ ಸೌಹಾರ್ದ ಸಹಕಾರಿ

ಪ್ರಗತಿಯತ್ತ ದಾಪುಗಾಲಿಡುತ್ತಿರುವ ಸಂತೃಪ್ತಿ ಸೌಹಾರ್ದ ಸಹಕಾರಿ

ದಾವಣಗೆರೆ, ಸೆ. 26- ಕಳೆದ ವರ್ಷ ಕಾರ್ಯಾರಂಭ ಮಾಡಿದ ನಗರದ ಸಂತೃಪ್ತಿ ಸೌಹಾರ್ದ ಸಹಕಾರಿ ಸಂಘವು ಒಂದೇ ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀಮತಿ ಸವಿತಾ ಮುರುಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಕಲಾ ಪ್ರಕಾಶ ವೃಂದ ಸಹಕಾರ ಸಮುದಾಯ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ಸಂಘದ ಪ್ರಥಮ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇವಲ 8 ತಿಂಗಳಲ್ಲಿ 16 ಲಕ್ಷ ರೂ. ಷೇರು ಬಂಡವಾಳ, 3.21 ಕೋಟಿ ರೂ. ಠೇವಣಿ ಹೊಂದಿದ್ದು, ಸದಸ್ಯರ ಅಗತ್ಯಕ್ಕನುಗುಣವಾಗಿ 3.05 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿ, 1.80ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ವಿಚಾರವೆಂದರು.

ಠೇವಣಿ ಗಣನೀಯವಾಗಿ ಏರಿಕೆಯಾಗಿರುವುದು ಉತ್ತಮ ಸಾಲಗಾರರು ಸಾಲದ ಸೌಲಭ್ಯ ಪಡೆದು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿರುವುದರಿಂದ ಸಹ ಕಾರಿಯು `ಅ ಶ್ರೇಣಿಯ ಸಂಘವಾಗಿ ಮುನ್ನಡೆದಿರುವುದು ಸಂಘದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸವಿತಾ ಮುರುಗೇಶ್ ಸಂತಸವನ್ನು ಹಂಚಿಕೊಂಡರು. 

ಗ್ರಾಹಕರು ಮತ್ತು ಸದಸ್ಯರ ಅಗತ್ಯಕ್ಕೆ ತಕ್ಕಂತೆ ಸೇವೆ ಒದಗಿಸಲು ಸಹಕಾರಿಯು ಸದಾ ಸಿದ್ಧವಿರುವುದಾಗಿ ಸಭೆಗೆ ಭರವಸೆ ನೀಡಿದ ಸವಿತಾ ಮುರುಗೇಶ್, ಇದೇ ಸಂದರ್ಭದಲ್ಲಿ ಸಹಕಾರಿಯ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ಸಲಹೆ, -ಸೂಚನೆ ನೀಡುತ್ತಾ ಬಂದಿರುವ ಸಹಕಾರಿಯ ಹಿತಚಿಂತಕರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀಮತಿ ಗಾಯತ್ರ ಮಾಯಾಚಾರಿ ಮತ್ತು ಕು. ಹಂಸಿನಿ ವಿ. ಮಠದ್ ಪ್ರಾರ್ಥಿಸಿದರು. ಶ್ರೀಮತಿ ಆರ್.ಬಿ. ಜ್ಯೋತಿ ಸ್ವಾಗತಿಸಿದರು. ಕೆ.ಎಂ. ಬಸವರಾಜ್ ವಾರ್ಷಿಕ ವರದಿ ಓದಿದರು. ಪಿ.ಆರ್. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿಯ ಉಪಾಧ್ಯಕ್ಷ ಎ.ಹೆಚ್. ಕುಬೇರಪ್ಪ, ನಿರ್ದೇಶಕರುಗಳಾದ ಎನ್.ಎ. ಮುರುಗೇಶ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಡಿ.ಕೆ. ಸಂಗಮೇಶ್, ಹೆಚ್. ತಿರುಕಪ್ಪ, ಪಿ.ಹೆಚ್.ವೆಂಕಪ್ಪ, ಎಂ.ಎನ್. ಹರೀಶ್, ಕೆ.ಎಂ. ಹಾಲಸ್ವಾಮಿ ಕಂಬಳಿ, ಸಿ.ಎಲ್. ನಟರಾಜ್, ಎನ್.ಎಂ. ಹಾಲಸ್ವಾಮಿ, ಬಿ.ವಿ. ವಿಶ್ವನಾಥ್, ಶ್ರೀಮತಿ ವೈ.ಸಿ. ಮಮತಾ, ಶ್ರೀಮತಿ ಗೀತಾ ಕೊಟ್ರೇಶ್, ವಿಶೇಷ ಆಹ್ವಾನಿತರುಗಳಾದ ಆರ್.ಟಿ. ಮೃತ್ಯುಂಜಯ, ಎಂ.ಎಸ್. ರುದ್ರಮುನಿ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!