ಫೈಜ್ನಟ್ರಾಜ್ ಗೆ `ಆಝಾದ್ ಕಥಾ ಸಾಧಕ’ ಪ್ರಶಸ್ತಿ

ಫೈಜ್ನಟ್ರಾಜ್ ಗೆ `ಆಝಾದ್ ಕಥಾ ಸಾಧಕ’ ಪ್ರಶಸ್ತಿ

ದಾವಣಗೆರೆ, ಸೆ. 26 – ಕರ್ನಾಟಕ ಸಾಂಸ್ಕೃತಿಕ ಗತವೈಭವ ಅಕಾಡೆಮಿ, ದಾವಣಗೆರೆ ಏರ್ಪಡಿಸಿದ್ದ ಪುಸ್ತಕ ಬಹುಮಾನ ಸ್ಪರ್ಧೆಯಲ್ಲಿ ಚನ್ನಗಿರಿ ತಾಲೂಕಿನ  ಸಂತೆಬೆನ್ನೂರು ಗ್ರಾಮದ ಸಾಹಿತಿ ಫೈಜ್ನಟ್ರಾಜ್ ಅವರಿಗೆ 2023 ನೇ ಸಾಲಿನ `ಆಝಾದ್ ಕಥಾ ಸಾಧಕ’ ಪ್ರಶಸ್ತಿ ಅವರ `ನದಿಯೊಂದು ಕಡಲ  ಹುಡುಕುತ್ತಾ..’ ಕಥಾ ಸಂಕಲನಕ್ಕೆ ಲಭಿಸಿದೆ. ಪ್ರಸ್ತುತ ಇವರು ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ಉಪಪ್ರಾಂಶುಪಾಲರಾಗಿದ್ದಾರೆ.

ಕಥೆ,ಕವಿತೆ, ಪ್ರಬಂಧಗಳಿಗೆ ಈಗಾಗಲೇ  ರಾಜ್ಯ ಪ್ರಶಸ್ತಿ ಗಳನ್ನು ಪಡೆದಿರುವ ಇವರಿಗೆ ಕರ್ನಾಟಕ ಸರ್ಕಾರ ಜಾರ್ಖಂಡ್ ನ ರಾಂಚಿಗೆ ಬಹುಭಾಷ ಕವಿಗೋಷ್ಠಿಗೆ ಕರ್ನಾಟಕದ ವತಿಯಿಂದ ಕನ್ನಡ ಕವಿ ಪ್ರತಿನಿಧಿಯಾಗಿ ಕಳಿಸಿಕೊಟ್ಟಿತ್ತು. ಇವರ ನದಿಯೊಂದು ಕಡಲ ಹುಡುಕುತ್ತಾ…ಕಥಾ ಸಂಕಲನಕ್ಕೆ ಇತ್ತೀಚೆಗಷ್ಟೇ ಮಂಡ್ಯದ ಅಡ್ವೈಸರ್ ಪತ್ರಿಕೆ ಕೊಡ ಮಾಡುವ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಇದೇ ಕೃತಿಗೆ ಇದೀಗ ಎರಡನೇ ಬಾರಿಗೆ ಬಹುಮಾನ ಲಭಸಿದೆ.

error: Content is protected !!