ಗುರುಕುಲ ಶಾಲೆಯ 13 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗುರುಕುಲ ಶಾಲೆಯ 13 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ದಾವಣಗೆರೆ, ಸೆ. 25 – ವಸತಿಯುತ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ 17/17 ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ನಗರದ ಗುರುಕುಲ ವಸತಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುಭಾಷ್‌ ಚಂದ್ರಬೋಸ್‌ ಒಳಾಂಗಣ ಕ್ರೀಡಾಕೂಟದಲ್ಲಿ ನಡೆದ ಈಜು ಸ್ಫರ್ಧೆಯಲ್ಲಿ ಬಿ.ಸೃಜನ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶೆಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಅಭಿಷೇಕ್‌, ಗಗನ್‌, ಚೇತನ್‌, ಚೇತನ್‌ ಪವಾರ್‌ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕುಸ್ತಿ ಒಳಾಂಗಣಂ ಕ್ರೀಡಾಂಗಣದಲ್ಲಿ ನಡೆದ ಜ್ಯೂಡೋ ಸ್ಫರ್ಧೆಯಲ್ಲಿ  ಪ್ರಥಮ್‌, ರಮೇಶ್‌, ಆರುಷ್‌ ತನ್ವಿತ್‌, ಸೈಯದಾ ಅಜ್ರ, ಪೂರ್ವಿತಾ, ಭೂಮಿಕಾ ಪ್ರಥಮ ಸ್ಥಾನ ಪಡೆದಿದ್ದಾರೆ.

error: Content is protected !!