ಹರಿಹರ, ಸೆ. 26 – ನಗರದ ನಗರಸಭೆ ಕಚೇರಿ ಯಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ನಗರ ಸಭೆ ಸದಸ್ಯ ಜಾವೀದ್ ತರಾಟೆಗೆ ತೆಗೆದುಕೊಂಡ ಘಟನೆ ಹರಿಹರ ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಗುರುವಾರ ನಡೆದಿದೆ.
ನಗರಸಭೆ ಸದಸ್ಯ ಜಾವೀದ್ ಪತ್ರಕರ್ತರ ಜತೆ ಮಾತನಾಡಿ, ಖಾತೆ ಬದಲಾವಣೆ, ಖಾತೆ ಮಾಡಿಕೊಡು ವುದಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಾಕಿ ಇರುವುದನ್ನು ಹಲವು ಬಾರಿ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಯವರ ಗಮನಕ್ಕೆ ತಂದಿದ್ದೆನೆ. ಸಾರ್ವ ಜನಿಕರು ಅರ್ಜಿ ಸಲ್ಲಿಸಿದ ವಾರದೊಳಗೆ ಪರಿಶೀಲಿಸಿ ಖಾತೆ ಮಾಡಿಕೊಡಬೇಕು. ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಅನಗತ್ಯ ವಿಳಂಬ ಮಾಡಿದರೆ ಸಹಿಸಲಾಗದು ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ನನ್ನ ತಾಯಿ ಶಾಹಿದಾ ಬೀ ಆನ್ಲೈನ್ ಖಾತೆಗೆ ಅರ್ಜಿ ಸಲ್ಲಿಸಿದರು. ಇದುವರೆಗೂ ಖಾತೆ ಬದಲಾವಣೆ ಆಗಿಲ್ಲ. ನನಗೆ ಸಹ ಅಲೆದಾಡಿಸುತ್ತ ಇವತ್ತು ಕೊಡುತ್ತೇವೆ ಎಂದು ಅಲೆದಾಡಿಸುತ್ತಿದ್ದಾರೆ. ಖಾತಾ ಬದಲಾವಣೆಗೆ ಶುಲ್ಕವನ್ನು ಈಗಾಗಲೇ 3,000 ಸಾವಿರ ರೂಪಾಯಿಗಳನ್ನು ಸಹ ನಾನು ಹಣ ಪಾವತಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರುಗಳಾದ ಬಾಬುಲಾಲ್, ಆಟೋ ಹನುಮಂತಪ್ಪ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.