ಜಿ.ಎಂ. ಔಷಧ ವಿದ್ಯಾಲಯಕ್ಕೆ ದ್ವಿತೀಯ ಸ್ಥಾನ

ಜಿ.ಎಂ. ಔಷಧ ವಿದ್ಯಾಲಯಕ್ಕೆ ದ್ವಿತೀಯ ಸ್ಥಾನ

ದಾವಣಗೆರೆ, ಸೆ. 26- ಈಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಲಯ ಮಟ್ಟದ ಮಹಿಳಾ ಥ್ರೋಬಾಲ್ ಪಂದ್ಯಾವಳಿಯಲ್ಲಿ ನಗರದ ಜಿ.ಎಂ. ಔಷಧ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟು 12 ತಂಡಗಳು ಪಾಲ್ಗೊಂಡಿದ್ದು, ಎಸ್.ಜೆ.ಎಂ. ಔಷಧ ಮಹಾ ವಿದ್ಯಾಲಯದ, ವಿದ್ಯಾರ್ಥಿನಿಯರೊಂದಿಗೆ ಸೆಣಸಾಡಿ ಕ್ವಾರ್ಟರ್ ಫೈನಲ್‌ನಲ್ಲಿ ನಗರದ ಜಿ.ಎಂ. ಔಷಧ ಮಹಾವಿದ್ಯಾಲಯ ಎರಡನೇ ಬಹುಮಾನ ಮುಡಿಗೇರಿಸಿಕೊಂಡಿದೆ ಎಂದು ಕಾಲೇಜಿನ   ಕ್ರೀಡಾ ವಿಭಾಗದ ಮುಖ್ಯಸ್ಥ ಮಹಮ್ಮದ್ ಯೂಸುಫ್ ದಮನಿ ತಿಳಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಬೋಳಕಟ್ಟಿ  ವಿದ್ಯಾರ್ಥಿನಿಯರನ್ನು ಕುರಿತು ಈ ಪಂದ್ಯಾವಳಿ ಕ್ರೀಡಾಪಟುಗಳಿಗೆ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದಲ್ಲದೆ ಆರೋಗ್ಯಯುತ ಸ್ಪರ್ಧಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹುರಿದುಂಬಿಸಿದರು.

error: Content is protected !!