ಐಎಂಎ ಮಹಿಳಾ ವಿಭಾಗದಿಂದ ವಿಶ್ವ ಹೃದಯ ದಿನಾಚರಣೆ

ಐಎಂಎ ಮಹಿಳಾ ವಿಭಾಗದಿಂದ ವಿಶ್ವ ಹೃದಯ ದಿನಾಚರಣೆ

ದಾವಣಗೆರೆ, ಸೆ. 25- ಐಎಂಎ ಮಹಿಳಾ ವಿಭಾಗದಿಂದ  ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಐ.ಎಂ.ಎ. ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೃದಯ ತಜ್ಞ ಡಾ. ಮಲ್ಲೇಶ್ ಹೃದಯಾಘಾತದ ಬಗ್ಗೆ ಉಪನ್ಯಾಸ ನೀಡಿದರು.

ಪುರುಷ ಹಾಗೂ ಸ್ತ್ರೀಯರಲ್ಲಿನ ಹೃದಯಘಾತದ ಬಗ್ಗೆ ಸಂಕ್ಷಿಪ್ತವಾಗಿ ಅವರು ವಿವರಿಸಿದರು.

ವೇದಿಕೆಯಲ್ಲಿ  ಅಧ್ಯಕ್ಷರಾದ ತ್ರಿವೇಣಿ ಮಲ್ಲೇಶ್, ಸಹ ಕಾರ್ಯದರ್ಶಿ ಸುಧಾ ಸತ್ಯನಾರಾಯಣ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಅನಿತಾ ಬಸವರಾಜ್, ಶೈಲಾ ಆಲೂರ್, ಮಮತಾ ಕುಮಾರ್, ಪುಷ್ಪ ಮಲ್ಲಿಕಾರ್ಜುನ್, ಗೀತಾ ಶಾಂತಕುಮಾರ್ ನಡೆಸಿಕೊಟ್ಟರು

error: Content is protected !!