ರಾಣೇಬೆನ್ನೂರು,ಸೆ.25- ಆಂಧ್ರಪ್ರದೇಶದ ಶ್ರೀ ಬಾಲಾಜಿ ದೇವಸ್ಥಾನದಲ್ಲಿ ವಿತರಿಸಲಾಗುವ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ ಹಿಂದೂ ವಿರೋಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ದೇಶದ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ ಮನವಿ ಪತ್ರವನ್ನು ದೇವಸ್ಥಾನ, ಮಠ ಹಾಗೂ ಧಾರ್ಮಿಕ ಮಹಾ ಸಂಘದ ವತಿಯಿಂದ ತಹಶೀಲ್ದಾರರಿಗೆ ಸಲ್ಲಿಸಲಾಯಿತು.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ತಂದೆ ರಾಜಶೇಖರ ರೆಡ್ಡಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದು, ಆ ಧರ್ಮದ ಪ್ರಚಾರಕ್ಕೆ ಅರ್ಚಕರ ನೇಮಕ, ಲಾಡು ತಯಾರಿಕೆ ಗುತ್ತಿಗೆ ಮುಂತಾದ ಚಟುವಟಿಕೆ ನಡೆಸಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಭಕ್ತಿಗಳಿಗೆ ಅವಮಾನ ಮಾಡಿದ್ದರು. ನಂತರದಲ್ಲಿ ಮುಖ್ಯಮಂತ್ರಿಗಳಾದ ಜಗನ್ಮೋಹನ್ ರೆಡ್ಡಿ ಸಹ ತಂದೆಯಂತೆ ಹಿಂದೂ ವಿರೋಧಿ ಭಾವನೆ ಹೊಂದಿದವರಾಗಿದ್ದು ಪ್ರಧಾನಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಸಂಘಟನೆಗಳ ಮುಖ್ಯಸ್ಥರಾದ ಜಿ.ಜಿ.ಹೊಟ್ಟಿಗೌಡ್ರ, ಪ್ರಕಾಶ ಬುರಡಿಕಟ್ಟಿ, ಹನುಮಂತಪ್ಪ ಹೆದ್ದೇರಿ, ಶಿವಾನಂದ ಸಾಲಗೇರಿ, ವಿಜಯ ಹುಗ್ಗಿ, ಶಿವಯೋಗಿ ಹಳ್ಳಳ್ಳಿ, ಮಾಲತೇಶ ತಳವಾರ, ಬಸವರಾಜ ಅಂತರವಳ್ಳಿ ಮತ್ತಿತರರಿದ್ದರು.