ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಕಿಸಾನ್ ಸಭಾ ಆಗ್ರಹ

ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಕಿಸಾನ್ ಸಭಾ ಆಗ್ರಹ

ಹರಪನಹಳ್ಳಿಯಲ್ಲಿ ಪ್ರತಿಭಟನೆ

ಹರಪನಹಳ್ಳಿ, ಸೆ.24- ರೈತರ   ಬೆಳೆಗಳಿಗೆ ವೈಜ್ಞಾನಿಕ ಬೆಲೆ  ಮತ್ತು   ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಅಖಿಲ ಭಾರತ ಕಿಸಾನ್ ಸಭಾದ ತಾಲ್ಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ತಾಲ್ಲೂಕಿನ ರೈತರ ಬದುಕು ಇತಿಹಾಸದ ಉದ್ದಕ್ಕೂ ಆನಂದಮಯ ವಾಗಿಯೇನೂ ಇರಲಿಲ್ಲ. ಈ ತಾಲ್ಲೂಕಿನ ಕೃಷಿಯು ಶ್ರೇಣಿ ಕೃತ ಜಾತಿ ಪದ್ದತಿಯೆಂಬ ಸಾಮಾಜಿಕ ವ್ಯವಸ್ಥೆಯ ಆಧಾರದಲ್ಲೇ ಉಳಿದು ಬೆಳೆದಿದೆ.   ಈ ಶ್ರೇಣಿಯಲ್ಲಿ ಕೊನೆಯಂಚಿನಲ್ಲಿರುವ ರೈತಾಪಿಗಳಾಗಿದ್ದ ಹಿಂದುಳಿದ ಸಮುದಾಯಗಳ ಬದುಕು ಸಹ ಧಾರುಣವಾಗಿಯೇ ಇದೆ ಎಂದರು. 

ನಮ್ಮ ತಾಲ್ಲೂಕಿನ ರೈತರು ಜೋಳ, ಮೆಕ್ಕೆಜೋಳ, ಭತ್ತ, ಹತ್ತಿ, ಶೇಂಗಾ, ಸೂರ್ಯ ಕಾಂತಿ ಬೆಳೆಯುತ್ತಿದ್ದಾರೆ. ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಉತ್ತಮ ವಾದ ಫಸಲುಗಳು ಬಂದಿದ್ದು, ಇನ್ನು ಅನೇಕ   ಪ್ರದೇಶಗಳಲ್ಲಿ ಹೆಚ್ಚು ಮಳೆಗೆ ಬೆಳೆ ನಾಶವಾ ಗಿರುತ್ತದೆ. ಹಾಗಾಗಿ  ಸರ್ಕಾರಗಳು ಕೂಡಲೇ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡ ಬಳಿಗಾನೂರು ಕೊಟ್ರೇಶ್   ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು.   ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು.     ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ   ಕೂಡಲೇ  ಹೊಸ ಪಡಿತರ ಚೀಟಿ ನೀಡಬೇಕು.  ಅರ್ಜಿ ಸಲ್ಲಿಸಲು ನಿರಂತರ ಅವಕಾಶ ನೀಡಬೇಕು ಎಂದರು.

ಸಂಘಟನೆಯ ರಾಗಿಮಸಲವಾಡ ಹನು ಮಂತಪ್ಪ, ಹರಿಯಮ್ಮನಹಳ್ಳಿ ಬಸವರಾಜ, ಹಗರಿಗುಡಿಹಳ್ಳಿ ಶಿವರಾಮ್, ಹನುಮಂತ ನಾಯ್ಕ, ಪ್ರಭುಗೌಡ, ಬಳಿಗಾನೂರು  ಪರಶುರಾಮ, ಕೋಟಿ ಭೀಮಪ್ಪ, ಧರ್ಮಣ್ಣ, ರಾಮಪ್ಪ ಸೇರಿದಂತೆ ಇತರರು ಇದ್ದರು.

error: Content is protected !!