ಹೊಳೆಸಿರಿಗೆರೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್ ಸಂತಸ
ಮಲೇಬೆನ್ನೂರು, ಸೆ.24- ಪಟ್ಟಣದ ಪ್ರತಿಷ್ಠಿತ ಶಿವ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಹೊಳೆಸಿರಿಗೆರೆ ಗ್ರಾಮದ ಶ್ರೀ ಕಲ್ಲೇಶ್ವರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಮೊನ್ನೆ ಜರುಗಿತು.
ಚಂದನ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಹಾಗೂ ವಕೀಲ ಹೆಚ್.ಬಿ.ಶಿವಕುಮಾರ್ ಅವರು ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿದರು.
ಅಟೆಂಡರ್ ಕೆ.ಶಂಭುಲಿಂಗ ಸಭೆಯ ವಿಷಯ ಸೂಚಿ ಓದಿದರೆ, ಪ್ರಥಮ ದರ್ಜೆ ಸಹಾಯಕ ಹೆಚ್.ಹನುಮಂತಪ್ಪ ಅವರು, 2023ರಲ್ಲಿ ಜರುಗಿದ ಮಹಾಸಭೆಯ ನಡಾವಳಿಗಳನ್ನು ಸಭೆಗೆ ತಿಳಿಸಿದರು. ಸಂಘದ ಉಪಾಧ್ಯಕ್ಷ ಜಿ.ಆಂಜನೇಯ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಹೊಳೆಸಿರಿಗೆರೆ ಶಾಖೆಯ ಪ್ರಭಾರ ಕ್ಯಾಷಿಯರ್ ಎಂ.ಎಸ್.ಅಕ್ಷರ, ಲೆಕ್ಕ ಪರಿಶೋಧನಾ ವರದಿಯನ್ನು ಸಭೆಗೆ ಓದಿ ತಿಳಿಸಿದರು. ಮುಖ್ಯ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಕೆ.ಜಿ.ಅಕ್ಷತಾ ಅವರು, ಅನುಪಾಲನಾ ವರದಿಗೆ ಸಭೆಯ ಅನುಮೋದನೆ ಪಡೆದರು.
ಕಾರ್ಯದರ್ಶಿ ಜಿ.ಎಂ.ನಳಿನಾ ಅವರು, ಆಡಳಿತ ಮಂಡಳಿ ತಯಾರಿಸಿದ ಅಂದಾಜು ಆಯ-ವ್ಯಯ ಪತ್ರಿಕೆಗೆ ಮಹಾಸಭೆಯ ಮಂಜೂರಾತಿ ಪಡೆದರು. ನಿರ್ದೇಶಕ ಹೆಚ್.ಜಿ.ಚಂದ್ರಶೇಖರ್ ಅವರು, ನಿವ್ವಳ ಲಾಭ ವಿಭಾಗಣೆಯನ್ನು ತಿಳಿಸಿದರು.
ಇನ್ನೋರ್ವ ನಿರ್ದೇಶಕ ಕೆ.ಎಸ್.ರಂಗನಾಥ್ ಅವರು, ಲೆಕ್ಕ ಪರಿಶೋಧಕರ ನೇಮಕ ಮತ್ತು ಅವರಿಗೆ ಸಂಭಾವನೆ ವಿಷಯ ಪ್ರಸ್ತಾಪಿಸಿದಾಗ ಸಭೆ ಒಪ್ಪಿಗೆ ನೀಡಿತು. ನಿರ್ದೇಶಕ ಬೆಳ್ಳೂಡಿಯ ಗೌಡ್ರ ರವಿಶಂಕರ್ ಅವರು, ಹೊಳೆಸಿರಿಗೆರೆಯಲ್ಲಿ ಸಂಘದ ಶಾಖಾ ಕಟ್ಟಡ ನಿರ್ಮಾಣದ ಯೋಜನೆ ಬಗ್ಗೆ ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಡಾ. ಬಿ.ಚಂದ್ರಶೇಖರ್ ಮಾತನಾಡಿ, ಸಂಘವು 75.81 ಲಕ್ಷ ರೂ.ಗಳನ್ನು ಪಾಲುಧನ ಹೊಂದಿದ್ದು, 3.05 ಕೋಟಿ ರೂ. ನಿಧಿಗಳನ್ನು ಮತ್ತು 9.11 ಕೋಟಿ ರೂ. ಠೇವಣಿಗಳನ್ನು ಹೊಂದಿದೆ.
ಈ ವರ್ಷದಲ್ಲಿ ಸದಸ್ಯರಿಗೆ 10.07 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದ್ದು, 58.57 ಲಕ್ಷ ರೂ.ನಿವ್ವಳ ಲಾಭ ಹೊಂದಿದೆ ಎಂದರು.
ಸಂಘವು ಮಲೇಬೆನ್ನೂರಿನಲ್ಲಿ ಮುಖ್ಯ ಕಚೇರಿಗೆ ಸುಸಜ್ಜಿತವಾದ ಸ್ವಂತ ಕಟ್ಟಡ ಮತ್ತು ಕುಂಬಳೂರು ಬಳಿ 2 ಎಕರೆ ಜಮೀನು ಹೊಂದಿದ್ದು, ಹೊಳೆಸಿರಿಗೆರೆಯಲ್ಲಿರುವ ಸಂಘದ ನಿವೇಶನದಲ್ಲಿ ಶಾಖಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಅದಕ್ಕಾಗಿ ಸದಸ್ಯರು ಈ ವರ್ಷದ ಲಾಭಾಂಶ ನೀಡಬೇಕೆಂದು ಸಂಘದ ಹಿರಿಯ ನಿರ್ದೇಶಕ ಬಣಕಾರ ವಿರೂಪಾಕ್ಷಪ್ಪನವರು ಕೇಳಿದಾಗ ಸಭೆ ಒಪ್ಪಿಗೆ ನೀಡುವ ಮೂಲಕ ಸಂಘದ ಪ್ರಗತಿ ಸಹಕರಿಸಿದ್ದೀರಿ ಎಂದು ಡಾ. ಬಿ.ಚಂದ್ರಶೇಖರ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಹೊಳೆಸಿರಿಗೆರೆಯ ಹಿರಿಯ ಮುಖಂಡ ಎನ್.ಜಿ.ನಾಗನಗೌಡ್ರು, ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ.ಹಾಲೇಶಪ್ಪ, ನಿಟ್ಟೂರಿನ ಎನ್.ಜಿ.ಶಿವಾಜಿ ಪಾಟೀಲ್, ಸಂಘದ ಹಿರಿಯ ನಿರ್ದೇಶಕ ಬಣಕಾರ ವಿರೂಪಾಕ್ಷಪ್ಪ ಮಾತನಾಡಿದರು.
ನಿರ್ದೇಶಕರಾದ ಶ್ರೀಮತಿ ಸರೋಜಮ್ಮ ಭರಮಗೌಡ, ಶ್ರೀಮತಿ ನಾಗರತ್ನ ಧನಂಜಯ, ಹೆಚ್.ಷಣ್ಮುಖಪ್ಪ, ಜಿ.ಡಿ.ರಮೇಶ್, ಎ.ದೇವೇಂದ್ರಪ್ಪ, ಎಸ್.ಸಿದ್ದೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ವಿಶ್ವಬಂಧು ಸೊಸೈಟಿ ಅಧ್ಯಕ್ಷ ಯಲವಟ್ಟಿ ಯೋಮಕೇಶ್ವರಪ್ಪ, ಮಲ್ಲನಾಯ್ಕನಹಳ್ಳಿ ಗೌಡ್ರಶೇಖರಪ್ಪ, ಚಿಟ್ಟಕ್ಕಿ ನಾಗರಾಜ್, ಕೆ.ಜಿ.ವೀರನಗೌಡ್ರು, ಹಳೇಮನಿ ಶಂಭುಲಿಂಗಪ್ಪ, ಎಂ.ಹೆಚ್.ಶಿವರಾಮಚಂದ್ರಪ್ಪ, ಕೆ.ಕುಬೇರಪ್ಪ, ಹಾಲಿವಾಣದ ಎಸ್.ಜಿ.ಹಾಲೇಶಪ್ಪ, ಸಿರಿಗೆರೆ ಮಲ್ಲೇಶಪ್ಪ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.
ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೆ.ಜಿ.ಭೂಮಿಕಾ, ಕೆ.ಎನ್.ಸ್ವಪ್ನ, ಕೆ.ಪಿ.ನಂದಿನಿ ಹಾಗೂ ಎನ್.ಎಂ.ಅನನ್ಯ, ಡಿ.ತೇಜಸ್ವಿನಿ ಅವರನ್ನು ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ಬೆಳ್ಳೂಡಿಯ ವಿಜಯಕುಮಾರ್, ಹೊಳೆಸಿರಿಗೆರೆಯ ರಾಜಶೇಖರ್ ಅವರನ್ನು ಮತ್ತು ಅತಿ ಕಡಿಮೆ ಸುಸ್ತಿ ಸಾಲವನ್ನು ಹೊಂದಿರುವ ಹನಗವಾಡಿ ಮಹೇಶ್, ಉಕ್ಕಡಗಾತ್ರಿ ಚಂದ್ರಶೇಖರ್ ಅವರನ್ನೂ ಈ ವೇಳೆ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ವಿಶೇಷ ಆಹ್ವಾನಿತ ಸಿರಿಗೆರೆಯ ಬಿ.ಶೇಖರಪ್ಪ ವಂದಿಸಿದರು.