ಭರ್ತಿಯಾಗುವತ್ತ ಕೊಮಾರನಹಳ್ಳಿ ಕೆರೆ…

ಭರ್ತಿಯಾಗುವತ್ತ ಕೊಮಾರನಹಳ್ಳಿ ಕೆರೆ…

ಮಲೇಬೆನ್ನೂರು, ಸೆ.24- ಕೊಮಾರನಹಳ್ಳಿಯ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿಯ 97 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆ ಭರ್ತಿಯಾಗುವತ್ತಾ ಹೆಜ್ಜೆ ಇಟ್ಟಿದೆ. ಮಳೆ ನೀರಿನ ಜೊತೆಗೆ ಭದ್ರಾ ನಾಲೆಯ ನೀರನ್ನೂ ಪಂಪ್‌ಸೆ ಟ್‌ಗಳ ಮೂಲಕ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕೆರೆಗೆ ಹರಿಸುತ್ತಿರುವುದರಿಂದ ಕೆರೆಯಲ್ಲಿ ನೀರಿನ ಮಟ್ಟ ಸಾಕಷ್ಟು ಏರಿಕೆ ಆಗುತ್ತಿದ್ದು, ಈ ವಾರದಲ್ಲೇ ಕೆರೆ ಭರ್ತಿಯಾಗಿ ಕೊಡಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಬಹಳ ನಿರೀಕ್ಷೆಯಲ್ಲಿದ್ದ ಕಮ್ಮಾರಗಟ್ಟಿ ಜಾಕ್‌ವೆಲ್‌ನಿಂದ ಬೆನಕನಹಳ್ಳಿ ಏತ ನೀರಾವರಿ ಯೋಜನೆಯ ನೀರು ಇಷ್ಟರಲ್ಲೇ ಪೈಪ್‌ಲೈನ್ ಮೂಲಕ ಈ ಕೆರೆಗೆ ಹರಿಯಬೇಕಾಗಿತ್ತು. ಆದರೆ, ವಿದ್ಯುತ್ ಸಂಪರ್ಕ ವಿಳಂಬವಾಗಿರುವುದರಿಂದ  ತಡವಾಗಿದೆ ಎಂದು ಗ್ರಾಮದ ಜಿ.ಮಂಜುನಾಥ್ ಪಟೇಲ್ ತಿಳಿಸಿದರು.  ನದಿ ನೀರು ಇನ್ನ್ಮುಂದೆ ನಿರಂತರವಾಗಿ ಕೆರೆಗೆ ಹರಿಯುವುದರಿಂದ ಜನ – ಜಾನುವಾರುಗಳಿಗೆ, ಪ್ರಾಣಿ – ಪಕ್ಷಿಗಳಿಗೆ ಮತ್ತು ಕೆರೆ ಪಾತ್ರದ ತೋಟಗಳಿಗೆ ಹಾಗೂ ಬೋರ್‌ವೆಲ್‌ಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು. 

ಸುತ್ತಲು ಹಸಿರಿನಿಂದ ಕೂಡಿದ ಗುಡ್ಡ ಮತ್ತು ತೋಟಗಳ ನಡುವೆ ಹಾಗೂ ಹೊಸಪೇಟೆ – ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲೇ ಇರುವ ಈ ಕೆರೆ ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.

error: Content is protected !!