ಜಗಳೂರು : ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು

ಜಗಳೂರು : ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು

ಪೌರ ಕಾರ್ಮಿಕರಿಗೆ  ಶಾಸಕ ಬಿ. ದೇವೇಂದ್ರಪ್ಪ ಸಲಹೆ

ಜಗಳೂರು, ಸೆ. 24 – ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ‌ ಒತ್ತು ನೀಡಿ ಉಜ್ವಲ  ಭವಿಷ್ಯ‌ ರೂಪಿಸಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 13ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರ ಸ್ವಚ್ಛತೆ ಕಾರ್ಯ ಶ್ಲ್ಯಾಘನೀಯ ಸಾರ್ವಜನಿಕರು  ಅವರಿಗೆ ಸಹಕರಿಸಿ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕು. ದುಶ್ಚಟಗಳಿಂದ ದೂರಾಗಿ ಆರ್ಥಿಕವಾಗಿ ಸದೃಢರಾಗಿ ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ’ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕರು ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಅವರೊಂದಿಗೆ ಸಹಕರಿಸಿ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕು ಎಂದರು. 

‘ಪಟ್ಟಣ ಪಂಚಾಯಿತಿ ಇಲಾಖೆ ಅಧಿಕಾರಿಗಳ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯ ಕ್ರಮಗಳಿಗೆ ಕೈಜೋಡಿಸಬೇಕು. ಹಸಿ ಕಸ-ಒಣ ಕಸ ಬೇರ್ಪಡಿಸಿ ಕಸ ವಿಲೇ ವಾರಿ ಮಾಡಬೇಕು’ ಎಂದು ಹೇಳಿದರು.

 ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು  ಶಾಸಕರು ಸನ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್,  ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ಪ.ಪಂ‌.ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷೆ  ಲೋಕಮ್ಮ, ತಾ.ಪಂ. ಇಓ ಕೆಂಚಪ್ಪ, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಜನಜಾಗೃತಿ ವೇದಿಕೆಯ ಪಿ.ಎಸ್.ಅರವಿಂದನ್, ಪಂ. ಸದಸ್ಯ ಆರ್. ತಿಪ್ಪೇಸ್ವಾಮಿ, ಲಲಿತಮ್ಮ, ನಿರ್ಮಲ ಕುಮಾರಿ, ಪಾಪಲಿಂಗಪ್ಪ, ಲುಕ್ಮಾನ ಖಾನ್, ಶಕೀಲ್‌ ಅಹಮ್ಮದ್‌, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಚಿನ್ನಪ್ಪ ಸೇರಿದಂತೆ ಸದಸ್ಯರು, ಸಿಬ್ಬಂದಿ
ವರ್ಗದರು ಇದ್ದರು.

error: Content is protected !!