ಜಿಗಳಿಯಲ್ಲಿ ಗಣಿತ ಕಲಿಕಾ ಆಂದೋಲನ

ಜಿಗಳಿಯಲ್ಲಿ ಗಣಿತ ಕಲಿಕಾ ಆಂದೋಲನ

ಮಲೇಬೆನ್ನೂರು, ಸೆ.26- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಮೊನ್ನೆ ಯಶಸ್ವಿಯಾಗಿ ನಡೆಸಲಾಯಿತು.

ಜಿಗಳಿ ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಯಲ್ಲಿ ಜಿಗಳಿ ಹಾಗೂ ಜಿ. ಬೇವಿನಹಳ್ಳಿ ಶಾಲೆಯ 4, 5 ಮತ್ತು 6 ನೇ ತರಗತಿಯ ಒಟ್ಟು 118 ಮಕ್ಕಳು ಪರೀಕ್ಷೆ ಬರೆದರು. ಜಿಗಳಿಯ 4 ಹಾಗೂ ಬೇವಿನಹಳ್ಳಿಯ 5 ಸೇರಿ ಒಟ್ಟು 9 ವಿದ್ಯಾರ್ಥಿಗಳು ವಿಜೇತರಾದರು. 

ಜಿಗಳಿ ಗ್ರಾ.ಪಂ ಅಧ್ಯಕ್ಷೆ ರೂಪಾ ಸೋಮಶೇಖರ್, ಉಪಾಧ್ಯಕ್ಷ ಡಿ ಎಂ ಹರೀಶ್ ಅವರು ಗ್ರಾ ಪಂ ನಿಂದ 6 ಸಾವಿರ ರೂ ಬಹುಮಾನವನ್ನು ವಿಜೇತ ಮಕ್ಕಳಿಗೆ ವಿತರಿಸಿದರು.  ಅಲ್ಲದೇ, ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ಪ್ರಶಂಸೆ ಪತ್ರ ವಿತರಿಸಲಾಯಿತು. 

ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಚಾರಿ, ಉಪಾಧ್ಯಕ್ಷೆ ಮಂಜುಳಾ ಮಾಲತೇಶ, ಗ್ರಾ.ಪಂ ಕಾರ್ಯದರ್ಶಿ ಸುಜಾತ,  ಮುಖಂಡರಾದ ಜಿ.ಆನಂದಪ್ಪ, ಬಿ.ಎಂ.ದೇವೇಂದ್ರಪ್ಪ, ಸೊಸೈಟಿ ಸಿಇಓ ಎನ್.ಎನ್.ತಳವಾರ್ ಭಾಗವಹಿಸಿದ್ದರು.  ಶಾಲಾ ಮುಖ್ಯ ಶಿಕ್ಷಕ ಲಿಂಗರಾಜ್ ಸ್ವಾಗತಿಸಿದರು. ಸಿ.ಆರ್.ಪಿ ನಂಜುಂಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.  ದೈಹಿಕ ಶಿಕ್ಷಕ ಶ್ರೀನಿವಾಸ್ ರೆಡ್ಡಿ ನಿರೂಪಿಸಿದರು. ಶಿಕ್ಷಕ ಮಲ್ಲಿಕಾರ್ಜುನ್ ವಂದಿಸಿದರು. 

ಶಿಕ್ಷಕರಾದ ಲೋಕೇಶ್, ಗುಡ್ಡಪ್ಪ, ಜಯಶ್ರೀ, ಶಿಲ್ಪ, ಹಾಲಮ್ಮ, ವಿಜಯಕುಮಾರ್ ಮತ್ತು ಸ್ವಯಂ ಸೇವಕರಾದ  ಅರ್ಪಿತ, ನಿರ್ಮಲ, ದಿವ್ಯ, ಸ್ನೇಹ, ಚಂದನ ಭಾಗವಹಿಸಿದ್ದರು.

error: Content is protected !!