ಕೆಎಸ್‌ಆರ್‌ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಕೆಎಸ್‌ಆರ್‌ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಹರಿಹರ, ಸೆ.23-  ಬಸ್ ಬ್ರೇಕ್ ಫೇಲ್‌ ಆದ ಸಂದರ್ಭದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಹರಿಹರ ತಾಲ್ಲೂಕು ಗುತ್ತೂರು ಸಮೀಪ ನಡೆದಿದೆ.

ಹೊಸಪೇಟೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸುಮಾರು 50 ರಿಂದ 70 ಪ್ರಯಾಣಿಕರಿದ್ದರು. ಚಾಲಕ ರಹಮತ್ ಅವರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ಮಧ್ಯೆ ಭಾಗದಲ್ಲಿ ಟ್ರ್ಯಾಕ್ಟರ್  ಕೆಟ್ಟು ನಿಂತಿದ್ದು,
ಹರಿಹರದಿಂದ ಬರುತ್ತಿದ್ದ ಬೈಕ್ ಸವಾರನ ಅಪಾಯ ತಪ್ಪಿಸಲು ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ಬ್ರೇಕ್ ಫೇಲ್ ಆದ ಕಾರಣ,  ಚಾಲಕನ ಸಮಯ ಪ್ರಜ್ಞೆಯಿಂದಾಗಿ ಗೇರ್ ತೆಗಿಯುವ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಇದರಿಂದಾಗಿ ಡ್ರೈವರ್ ರಹಮತ್ ಡ್ರೈವಿಂಗ್ ಚತುರತೆ, ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿ ಪ್ರಯಾಣಿಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.

error: Content is protected !!