67ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೆ.ರವೀಂದ್ರ
ಹರಿಹರ, ಸೆ.22- ಹರಿಹರೇಶ್ವರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಈ ಸಾಲಿನಲ್ಲಿ 2.66 ಲಕ್ಷ ರೂಪಾಯಿ ತಾತ್ಕಾಲಿಕ ಲಾಭವನ್ನು ಗಳಿಸಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ. ರವಿಚಂದ್ರ ಹೇಳಿದರು.
ಕಾಟ್ವೆ ಭವನದಲ್ಲಿ ಬ್ಯಾಂಕ್‌ನ 67ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
68ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ನಮ್ಮ ಬ್ಯಾಂಕ್ 3413 ಸದಸ್ಯರನ್ನು ಹೊಂದಿದ್ದು, 63.42 ಲಕ್ಷ ರೂಪಾಯಿ ಷೇರು ಬಂಡವಾಳ ಹೊಂದಿದೆ. ಕಳೆದ ಸಾಲಿಗಿಂತ 4.51 ಲಕ್ಷ ರೂಪಾಯಿ ಷೇರು ಬಂಡವಾಳ ಹೆಚ್ಚಿಗೆ ಆಗಿರುತ್ತದೆ. 106.58 ಆಪದ್ಧನ ಮತ್ತು ಇತರೆ ನಿಧಿಗಳಿದ್ದು, 665.55 ಲಕ್ಷ ರೂಪಾಯಿ ಠೇವಣಿಯನ್ನು ಹೊಂದಿರುತ್ತದೆ. ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಗಳಿಗೆ ಡಿ.ಐ. ಸಿಜಿಸಿ ವಿಮೆ ನಿಯಮಕ್ಕೆ ಒಳಪಟ್ಟು ಹಣ ಸಂಪೂರ್ಣ ಸುರಕ್ಷಿತ ವಾಗಿರುತ್ತದೆ ಎಂದರು.
ಷೇರುದಾರರ ಹಿತ ದೃಷ್ಟಿಯಿಂದ ಶೇ. 2 ರೂಪಾಯಿ ಬಡ್ಡಿಯನ್ನು ಕಡಿಮೆ ಮಾಡಿ ಸಾಲವನ್ನು ನೀಡುವ ತೀರ್ಮಾನವನ್ನು ಆಡಳಿತ ಮಂಡಳಿ ಕೈಗೊಂಡಿದೆ ಎಂದರು.
ಜಿಲ್ಲಾ ಕೇಂದ್ರ ಬ್ಯಾಂಕ್, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ಗಳಲ್ಲಿ 466.60 ಲಕ್ಷ ಠೇವಣಿ ತೊಡಗಿಸಲಾಗಿದೆ. ಸದಸ್ಯರುಗಳಿಗೆ 24 ನೇ ಸಾಲಿನ ಅಂತ್ಯಕ್ಕೆ 260.70 ಲಕ್ಷ ರೂಪಾಯಿ ಸಾಲವನ್ನು ನೀಡಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಹಾಲೇಶ್ ಬಾವಿಕಟ್ಟಿ ಮಾತನಾಡಿ, ಬ್ಯಾಂಕಿನಲ್ಲಿ ವಿಮೆ, ಮರಣೋತ್ತರ ನಿಧಿ, ಡಿಮ್ಯಾಂಡ್ ಡ್ರಾಫ್ಟ್, ಛಾಪಾ ಕಾಗದ, ಎಸ್ಎಂಎಸ್. ಬ್ಯಾಂಕಿಂಗ್ ಯೋಜನೆ, ಕೋರ್ ಬ್ಯಾಂಕಿಂಗ್ ಇತ್ಯಾದಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ವಾರ್ಷಿಕ ವರದಿಯನ್ನು ಪ್ರಧಾನ ವ್ಯವಸ್ಥಾಪಕ ಸಿ. ಪ್ರಕಾಶ್ ಮಂಡಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ಕೆ. ಅನ್ವರ್ ಪಾಷಾ, ಕೆ. ಅಣ್ಣಪ್ಪ, ಜಿ.ಕೆ. ಮಲ್ಲಿಕಾರ್ಜುನ್, ಪರಶುರಾಮ್ ಅಂಬೇಕರ್ ವಕೀಲರು, ವಿದ್ಯಾ ಆರ್. ರಾಘವೇಂದ್ರ ಮೆಹರ್ವಾಡೆ, ನಾಗೇಂದ್ರಸಾ ಕಾಟ್ವೆ, ಜಿ.ವಿ. ಪ್ರವೀಣ್ ಕುಮಾರ್, ಹೆಚ್.ಆರ್. ವೀಣಾ ಒಳಗಡ್ಡಿ ಸಿದ್ದೇಶ್, ಬಿ.ಆರ್.
ಈಶ್ವರ್, ಸಿಬ್ಬಂದಿಗಳಾದ ಶಶಿಕಲಾ ಪರುಶುರಾಮ್, ರೇಖಾ ಮೆಹರ್ವಾಡೆ, ಬಿಂದು, ಹೆಚ್. ಸತ್ಯನಾರಾಯಣ
ರಾವ್, ಪಿ. ಪ್ರಶಾಂತ್, ಎ ಶಿವಕುಮಾರ್, ಎ. ಕಿರಣ್, ಪಿಗ್ಮಿ ಸಂಗ್ರಾಹಕರಾದ ಬಿ.ಕೆ. ಕರಿಬಸಪ್ಪ, ಹೆಚ್.ಎಂ ಸುಮಾ, ಎಸ್. ವೀಣಾ, ಹೆಚ್. ನಾಗರಾಜ್, ಸಾಯಿಚಂದ್ರ, ಬಿ.ಡಿ. ಸುರೇಶ್, ಎಂ.ವಿ. ಲಲಿತಾ ಇತರರು ಹಾಜರಿದ್ದರು.