ದಾವಣಗೆರೆ, ಸೆ. 22 –ಭದ್ರಾ ಮೇಲ್ದಂಡೆಗೆ ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜ್ ಒತ್ತಾಯಿಸಿದ್ದಾರೆ.
ಅಣೆಕಟ್ಟು ತುಂಬಿ ಹರಿದಾಗ ಮಾತ್ರ ಭದ್ರಾ ಮೇಲ್ದಂಡೆಗೆ ನೀರು ಹರಿಸಬೇಕಿದೆ. ಆದರೆ, ಭದ್ರಾ ಅಣೆಕಟ್ಟೆ ತುಂಬಿದ ಸಂದರ್ಭದಲ್ಲಿ ನೀರು ಹರಿಸಿಲ್ಲ. ಈಗ ಒಳಹರಿವು ಕಡಿಮೆಯಾದ ನಂತರ ನೀರು ಹರಿಸಲಾಗುತ್ತಿದೆ ಎಂದವರು ಆಕ್ಷೇಪಿಸಿದ್ದಾರೆ.
ಭದ್ರಾ ಮೇಲ್ದಂಡೆಗೆ ನೀರು ಹರಿಸಿದರೆ, ಮುಂದಿನ ದಿನಗಳಲ್ಲಿ ಬೇಸಿಗೆ ಬೆಳೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ ಎಂದು ಲಿಂಗರಾಜ್ ಹೇಳಿದ್ದಾರೆ.