ಚಿಗಟೇರಿ ಕುಟುಂಬಕ್ಕೆ ದಾಸೋಹ ರತ್ನ ಪ್ರಶಸ್ತಿ

ಚಿಗಟೇರಿ ಕುಟುಂಬಕ್ಕೆ ದಾಸೋಹ ರತ್ನ ಪ್ರಶಸ್ತಿ

ದಾವಣಗೆರೆ, ಸೆ.17- ನಗರದ ಕೊಡುಗೈ ದಾನಿಗಳಾದ ಮುರಿಗೆಪ್ಪ ಚಿಗಟೇರಿ, ಈ ಮನೆತನದ ಸಮಾಜ ಸೇವೆ ಮತ್ತು ದಾಸೋಹ ಮನೋಭಾವ  ಗುರುತಿಸಿದ ಬೆಂಗಳೂರಿನ ಬಸವ ಸಮಿತಿಯು `ದಾಸೋಹ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನ ಬಸವ ಸಮಿತಿ ಅನುಭವ ಮಂಟಪದಲ್ಲಿ ನಡೆದ ಡಾ.ಬಿ.ಡಿ ಜತ್ತಿ ಅವರ 112ನೇ ಜನ್ಮ ದಿನಾಚರಣೆ ಮತ್ತು ವಜ್ರ ಮಹೋತ್ಸವದಲ್ಲಿ ಚಿಗಟೇರಿ ಕುಟುಂಬದ ಸುಧಾ ಜಯಪ್ರಕಾಶ್ ಮತ್ತು ಮುರುಘ ರಾಜೇಂದ್ರ ಜೆ. ಚಿಗಟೇರಿ
ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಬೇಲಿ ಮಠಾಧ್ಯಕ್ಷ ಶಿವರುದ್ರ ಶ್ರೀಗಳು, ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ್ ಜತ್ತಿ, ವೀರಶೈವ ಲಿಂಗಾಯತ ಅಭಿವೃದ್ಧಿ  ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್ ಪರಮಶಿವಯ್ಯ, ಪ್ರಭುದೇವ್ ಚಿಗಟೇರಿ ಸೇರಿದಂತೆ ಗಣ್ಯರು ಇದ್ದರು.

error: Content is protected !!