ದಾವಣಗೆರೆ. ಸೆ.16- ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಗರದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ 1250ಕ್ಕೂ ಅಧಿಕ ವಿದ್ಯಾರ್ಥಿಗಳು, ಹರಿಹರ ನಗರ ಗಾಂಧಿ ಮೈದಾನದಲ್ಲಿ ಅಕ್ಷರ ಸರಪಳಿ ಮೂಲಕ ಸಂವಿಧಾನ ಪೀಠಿಕೆಯ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟಿಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಎಂಬ ಪದ ರಚಿಸಿ ಎಲ್ಲರ ಗಮನ ಸೆಳೆದರು. ಈ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ ಹರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳಿದ್ದರು.
ಸಿದ್ದಗಂಗಾ ವಿದ್ಯಾರ್ಥಿಗಳಿಂದ ಅಕ್ಷರ ಸರಪಳಿ
