ಮಕ್ಕಳಿಗೆ ಗ್ರಾಮೀಣ ಕ್ರೀಡೆ, ಕಲೆ, ಸಾಹಿತ್ಯವನ್ನೂ ಕಲಿಸಿ

ಮಕ್ಕಳಿಗೆ ಗ್ರಾಮೀಣ ಕ್ರೀಡೆ, ಕಲೆ, ಸಾಹಿತ್ಯವನ್ನೂ ಕಲಿಸಿ

ಜಿಗಳಿ : ಪ್ರತಿಭಾ ಕಾರಂಜಿ ಉದ್ಘಾಟನೆಯಲ್ಲಿ ಪೋಷಕರಿಗೆ ಹೆಚ್.ಚಂದ್ರಪ್ಪ ಮನವಿ

ಮಲೇಬೆನ್ನೂರು, ಸೆ.16- ಪೋಷಕರು ಮಕ್ಕಳಿಗೆ ಗ್ರಾಮೀಣ ಕ್ರೀಡೆ, ಕಲೆ, ಸಾಹಿತ್ಯವನ್ನು ಪರಿಚಯಿಸಿ, ಅವುಗಳನ್ನೂ ಕಲಿಯಲು ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ ಹೇಳಿದರು.

ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕುಂಬಳೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳಿಗೆ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೂ ಒತ್ತು ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಶಿಕ್ಷಕರೂ ಕ್ರಿಯಾಶೀಲರಾಗಬೇಕೆಂದು ಅವರು ಹೇಳಿದರು. 

 ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್‌ಪಿ ಕೆ.ಜಿ.ನಂಜುಂಡಪ್ಪ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಾಡುತ್ತಿದ್ದು, ಮಕ್ಕಳನ್ನು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿಯೂ ಬೆಳೆಸುವ ಕೆಲಸ ಈ ಕಾರ್ಯಕ್ರಮದಲ್ಲಿ ಆಗಲಿದೆ ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎನ್.ನಾಗರಾಜ್, ನಿವೃತ್ತ ಶಿಕ್ಷಕ ಜಿ.ನಾಗೇಶ್, ತಾ. ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪ್ಯಾಟಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಚಾರಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಡಿ.ಎಂ.ಹರೀಶ್, ಗ್ರಾ.ಪಂ. ಸದಸ್ಯರಾದ ಕೆ.ಜಿ.ಬಸವರಾಜ್, ಎಕ್ಕೆಗೊಂದಿ ಚೇತನ್‌ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಎನ್‌ಪಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ್, ಗ್ರಾಮದ ಮುಖಂಡರಾದ ಬಿ.ಸೋಮ ಶೇಖರಚಾರಿ, ನಾಗಸನಹಳ್ಳಿ ಮಹೇಶ್ವರಪ್ಪ, ಡಿ.ಆರ್.ಮಧು, ಜಿ.ಪಿ.ಹನುಮಗೌಡ, ಎಕ್ಕೆಗೊಂದಿ ರುದ್ರಗೌಡ, ಸಿ.ಎನ್.ಪರಮೇಶ್ವರಪ್ಪ, ಬನ್ನಿಕೋಡು ನಾಗರಾಜಪ್ಪ, ಪಿಎಸಿಎಸ್ ಸಿಇಓ ಎನ್.ಎನ್.ತಳವಾರ್, ಜಿ.ಆರ್.ಚಂದ್ರಪ್ಪ, ಟಿ.ಎಸ್.ಗದಿಗೇಶ್, ಎಂ.ಆರ್.ನಾಗರಾಜ್, ಟಿ.ನಾಗರಾಜ್, ವಿಜಯಭಾಸ್ಕರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಮಂಜುಳಾ ಮಾಲತೇಶ್, ಪತ್ರಕರ್ತ ಪ್ರಕಾಶ್, ಎಲ್‌ಕೆಜಿ, ಯುಕೆಜಿ ಅಧ್ಯಕ್ಷ ಕೆ.ಎಸ್.ಮಾಲತೇಶ್, ನಿವೃತ್ತ ಶಿಕ್ಷಕರಾದ ಡಿ.ರವೀಂದ್ರಪ್ಪ, ಜಿ.ಆರ್.ನಾಗರಾಜ್, ಕಮಲಾಪುರದ ಕರಿಬಸಪ್ಪ, ಬಿ.ರವೀಂದ್ರಚಾರಿ, ಮಲೇಬೆನ್ನೂರು ಆಶ್ರಯ ಕಾಲೋನಿ ಶಾಲೆಯ ಮುಖ್ಯ ಶಿಕ್ಷಕಿ ಸುಧಾ, ತಾ. ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ.ಮಂಜಪ್ಪ, ಅನುದಾನಿತ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಕೆ.ಭೀಮಪ್ಪ, ಶಿಕ್ಷಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಶಿಕುಮಾರ್, ಚಿಟ್ಟಕ್ಕಿ ಶಾಲೆಯ ಶಿಕ್ಷಕ ವೀರಭದ್ರಚಾರ್, ಬೆಣ್ಣೆಹಳ್ಳಿ ಬಸವರಾಜ್ ಸೇರಿದಂತೆ ಇನ್ನೂ ಅನೇಕರು ವೇದಿಕೆಯಲ್ಲಿದ್ದರು.

ಜಿಗಳಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಲಿಂಗರಾಜ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀನಿವಾಸ್ ರೆಡ್ಡಿ, ಶಿಕ್ಷಕ ಗುಡ್ಡಪ್ಪ ನಿರೂಪಿಸಿದರು.  ಶಿಕ್ಷಕ ಮಲ್ಲಿಕಾರ್ಜುನ್ ವಂದಿಸಿದರು.

error: Content is protected !!