ಆನಗೋಡಿನ ರೈತ ಸ್ಮಾರಕ ಭವನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಸಚಿವರಿಗೆ ಮನವಿ

ಆನಗೋಡಿನ ರೈತ ಸ್ಮಾರಕ ಭವನಕ್ಕೆ  ಅಗತ್ಯ ಸೌಲಭ್ಯ ಕಲ್ಪಿಸಲು ಸಚಿವರಿಗೆ ಮನವಿ

ದಾವಣಗೆರೆ, ಸೆ. 15 – ಇಲ್ಲಿಗೆ ಸಮೀಪದ ಆನಗೋಡಿನಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಹೋರಾಟದ ಫಲವಾಗಿ ನಿರ್ಮಾಣಗೊಂಡಿರುವ ರೈತ ಸ್ಮಾರಕ ಭವನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಮತ್ತು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರುಗಳಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದರು. 

ಮೊನ್ನೆ ನಡೆದ ರೈತ ಸ್ಮಾರಕ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರು ಮತ್ತು ಸಂಸದರು ಹಾಗೂ ಶಾಸಕ ಕೆ.ಎಸ್.ಬಸವಂತಪ್ಪ ಅವರುಗಳಿಗೆ ಸಮಿತಿ ಅಧ್ಯಕ್ಷ ಎನ್. ಜಿ. ಪುಟ್ಟಸ್ವಾಮಿ, ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, ರೈತ ಮುಖಂಡ ಶಾಮನೂರು ಹೆಚ್.ಆರ್. ಲಿಂಗರಾಜ್ ಮತ್ತು ಇತರರು ಮನವಿ ಪತ್ರ ಅರ್ಪಿಸಿದರು.

ಸ್ಮಾರಕ ಭವನಕ್ಕೆ ಸಂಪರ್ಕ ರಸ್ತೆ ಕಲ್ಪಿಸುವುದು, ರೈತ ಸಮುದಾಯ ಭವನ ಮತ್ತು ಅದಕ್ಕೆ ಹೊಂದಿಕೊಂಡಂತೆ 10 ಕೊಠಡಿಗಳನ್ನು ನಿರ್ಮಿಸುವುದು, ಸ್ಮಾರಕ ಭವನಕ್ಕೆ ನೀರಿನ ಸೌಕರ್ಯ ಕಲ್ಪಿಸುವುದು, ರೈತ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವಂತೆ ಅವರು ಕೇಳಿಕೊಂಡಿದ್ದಾರೆ.

error: Content is protected !!