ಮಲೇಬೆನ್ನೂರಿನಲ್ಲಿ ಗಮನ ಸೆಳೆದ ಬೃಹತ್‌ ಮಾನವ ಸರಪಳಿ

ಮಲೇಬೆನ್ನೂರಿನಲ್ಲಿ ಗಮನ ಸೆಳೆದ ಬೃಹತ್‌ ಮಾನವ ಸರಪಳಿ

ಎಲ್ಲರಿಗೂ ಬಿಸ್ಕತ್ತು, ನೀರು, ನೀಡಿದ ಕುಂಬಳೂರಿನ ಮಹೇಂದ್ರ ದಂಪತಿ

ಮಲೇಬೆನ್ನೂರು, ಸೆ. 15 – ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಭಾನು ವಾರ ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಕೊಮಾರನಹಳ್ಳಿ ಸಮೀಪ ಇರುವ ಹೊನ್ನಾಳಿ ತಾಲ್ಲೂಕಿನ ಗಡಿ ಭಾಗದಿಂದ ಹರಿಹರ ನಗರದವರೆಗೂ ಬೃಹತ್‌ ಉದ್ದದ ಮಾನವ ಸರಪಳಿ ನಿರ್ಮಿಸಿ, ಸಂವಿಧಾನದ ಪಿಠೀಕೆಯನ್ನು ಸಾಮೂಹಿಕವಾಗಿ ವಾಚನ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಲಾಯಿತು.

ಕೊಮಾರನಹಳ್ಳಿ ಮಲೇಬೆನ್ನೂರು, ಕುಂಬಳೂರು, ನಂದಿತಾವರೆ, ಎಕ್ಕೆಗೊಂದಿ ಕ್ರಾಸ್‌, ಬೆಳ್ಳೂಡಿ, ಹರಿಹರ ಬೈಪಾಸ್‌ವರೆಗೆ ಮಾನವ ಸರಪಳಿ ನಿರ್ಮಾಣವಾಗಿತ್ತು.

ಸ್ಥಳೀಯ ಜನ ಪ್ರತಿನಿಧಿಗಳು, ಸಾರ್ವ ಜನಿಕರು, ಸ್ತ್ರೀ-ಸ್ವಸಹಾಯ ಸಂಘಗಳ ಮಹಿಳೆ ಯರು, ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಬೆಸ್ಕಾಂ, ಕಂದಾಯ, ಶಿಕ್ಷಣ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಈ ಬೃಹತ್‌ ಮಾನವ ಸರಪಳಿಯಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಸಂಕಲ್ಪ ಮಾಡಿದರು. ಬೆಳಿಗ್ಗೆ ಬಿಸಲಿನ ಚುರುಕನ್ನು ಲೆಕ್ಕಿಸದೇ ಎಲ್ಲರೂ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಕಂಬಳೂರಿನ ಎಂ.ಹೆಚ್‌. ಮಹೇಂದ್ರ ಹಾಗೂ ಎಂ.ಹೆಚ್‌. ರಮೇಶ್‌ ಅವರು ಮಾನವ ಸರಪಳೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಬಿಸ್ಕತ್ತು, ನೀರು ವಿತರಿಸಿದರು.

ತಹಶೀಲ್ದಾರ್‌ ಗುರುಬಸವರಾಜ್‌, ಬಿಇಓ ದುರುಗಪ್ಪ, ತಾ.ಪಂ. ಇಓ ಸುಮಲತಾ, ಡಿವೈಎಸ್ಪಿ ಬಸವರಾಜ್‌, ಸಿಪಿಐ ಸುರೇಶ್‌ ಸಗರಿ, ಪಿಎಫ್‌ಐ ಪ್ರಭು ಕೆಳಗಿನ ಮನಿ, ಉಪತಹಶೀಲ್ದಾರ್‌ ಆರ್‌. ರವಿ, ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್‌ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಂಡರು.

error: Content is protected !!