ಮಕ್ಕಳಿಗೆ ಶಿಸ್ತಿನ ಜೊತೆ ವಿನಯ ಕಲಿಸಬೇಕು

ಮಕ್ಕಳಿಗೆ ಶಿಸ್ತಿನ ಜೊತೆ ವಿನಯ ಕಲಿಸಬೇಕು

ಹರಪನಹಳ್ಳಿ: ಚೆಸ್ ಪಂದ್ಯಾವಳಿಯಲ್ಲಿ ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ

ಹರಪನಹಳ್ಳಿ, ಸೆ.15-  ಶಿಸ್ತು ಇರುವ ಕಡೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ   ಇರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಸ್ತು ಮತ್ತು  ವಿನಯವನ್ನೂ  ಕಲಿಸಬೇಕು   ಎಂದು ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ   ಪರ್ಲ್ ಪಬ್ಲಿಕ್ ಶಾಲೆಯಲ್ಲಿ  ದಕ್ಷಿಣ ವಲಯದ  ಚೆಸ್  ಪಂದ್ಯಾವಳಿಯನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಚದುರಂಗ ಆಟಕ್ಕೆ  ಏಕಾಗ್ರತೆ ಬೇಕೇ ಬೇಕು. ಇದೇ ಕಾರಣಕ್ಕೆ ಇದು ಬುದ್ಧಿವಂತರ ಆಟ ಎಂದು ಕರೆಸಿಕೊಳ್ಳುವುದು. ಈ ಆಟ ಕೆಲವರಿಗೆ ಚಟವಾಗಿಯೂ ಕಾಡುವುದುಂಟು, ಇದನ್ನು ಜೂಜಾಟವನ್ನಾಗಿಯೂ ಕೆಲವರು ಪರಿಗಣಿ ಸುತ್ತಾರೆ. ಪಠ್ಯದ ಜೊತೆ ಪಠ್ಯೇತರ  ಚಟುವಟಿಕೆ ಗಳು ಬಹುಮುಖ್ಯವಾಗಿವೆ.  ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಬೇಡಿ  ತಂದೆ- ತಾಯಿ, ಗುರುಗಳ ಮಾತು ಕೇಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಶಿಕ್ಷಣ ಇಲಾಖೆಯ ಬಿಆರ್‌ಸಿ  ಹೊನ್ನತ್ತೆಪ್ಪ ಮಾತ ನಾಡಿ,   ಪಂದ್ಯಾವಳಿಯನ್ನು ಶಿಸ್ತು ಬದ್ದ ವಾಗಿ,   ಗುಣಮಟ್ಟದ ಆಟವನ್ನು ಆಯೋಜಿಸಿರುವುದು  ಉತ್ತಮ ಬೆಳವಣಿಗೆ ಆಗಿದೆ. ಮಹಾಭಾರತ ಕಾಲಘಟ್ಟಕಾಲದಲ್ಲಿ ಕೂಡ ಚದುರಂಗ  ಜನಪ್ರಿಯವಾಗಿತ್ತು   ಎಂದರು.

ಪರ್ಲ್ ಪಬ್ಲಿಕ್ ಶಾಲೆಯ ಗೌರವ ಅಧ್ಯಕ್ಷ ಶಶಿಧರ್ ಪೂಜಾರ್ ಮಾತನಾಡಿ, ಚದುರಂಗ ಆಟದ ಉದ್ದೇಶ ಎದುರಾಳಿ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು. ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ.  ಚದುರಂಗ ಅದೃಷ್ಟದ ಆಟವಲ್ಲ  ಬುದ್ದಿವಂತಿಕೆಯಿಂದ ಆಡುವ ಆಟವಾಗಿದೆ. ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿರುವ ಈ ಆಟದ ಮೂಲ ಯಾವುದು ಎಂಬುದರ ಬಗ್ಗೆ ಅನೇಕ ಗೊಂದಲಗಳಿವೆ. ಹೆಚ್ಚಿನವರು ಭಾರತ ಎಂದರೆ, ಇನ್ನು ಕೆಲವರು ಚೀನಾ, ಪರ್ಷಿಯಾ ಎಂದು ವಾದಿಸುತ್ತಾರೆ ಎಂದರು. ಪರ್ಲ್‌ ಪಬ್ಲಿಕ್ ಶಾಲೆ  ಪ್ರಾಂಶುಪಾಲರಾದ ಸುಮಾ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ವೇಳೆ ಪ್ರಕೃತಿ ವಿದ್ಯಾ ಸಂಸ್ಥೆ  ಅಧ್ಯಕ್ಷ ಮಂಜುನಾಥ್ ಪೂಜಾರ್, ಉಪಾಧ್ಯಕ್ಷ ನಾಗೇಶ್ ಉಪ್ಪಿನ್, ಕಾರ್ಯದರ್ಶಿ  ಮಾಲತೇಶ್ ಚಳಗೇರಿ, ಖಜಾಂಚಿ ಬಸವರಾಜ್ ಹುಲ್ಲತ್ತಿ, ಕಾರ್ಯನಿ ರ್ವಾಹಕ ನಿರ್ದೇಶಕ ಚೆನ್ನೇಶ್, ಬಣಕಾರ್,  ನಿರ್ದೇ ಶಕ ವಿರೂಪಾಕ್ಷಪ್ಪ, ಸಂಗೀತ ಶಿಕ್ಷಕ  ಬಸವರಾಜ ಬಂಡಾರಿ  ಸೇರಿದಂತೆ ಇತರರು ಇದ್ದರು

error: Content is protected !!