ಹರಿಹರ ಗಡಿಭಾಗದಲ್ಲಿ ನಾಳೆ `ಮಾನವ ಸರಪಳಿ’ ಕಾರ್ಯಕ್ರಮ

ಹರಿಹರ ಗಡಿಭಾಗದಲ್ಲಿ ನಾಳೆ `ಮಾನವ ಸರಪಳಿ’ ಕಾರ್ಯಕ್ರಮ

ಸ್ಥಳ ಪರಿಶೀಲಿಸಿದ ಹಾವೇರಿ ಎಡಿಸಿ ಪೂಜಾರ್ ವೀರಮಲ್ಲಪ್ಪ

ಹರಿಹರ, ಸೆ,13- ಇದೇ 15ರಂದು  ನಡೆಯಲಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿ ಕರಿಗೆ ಸಂವಿಧಾನದ ಆಶಯಗಳನ್ನು ಮನವರಿಕೆ ಮಾಡಿಕೊಡುವಂತಹ ಕಾರ್ಯಕ್ರಮವಾಗಿದೆ ಎಂದು ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.

ದಿನಾಚರಣೆ ಅಂಗವಾಗಿ  ಮಾನವ ಸರಪಳಿ ಕಾರ್ಯಕ್ರಮದ ಸಿದ್ಧತೆ ಕುರಿ ತಂತೆ ನಗರದ ತುಂಗಭದ್ರಾ ನದಿಯ ಸೇತುವೆ ಹತ್ತಿರ ಗಡಿ ಭಾಗದ ಸ್ಥಳಕ್ಕೆ ಭೇಟಿಕೊಟ್ಟು  ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ನ್ಯಾಮತಿ ಮತ್ತು ಹರಿಹರ ತಾಲ್ಲೂಕಿನ ಮೂಲಕ ಹಾವೇರಿ ಜಿಲ್ಲೆಯಲ್ಲಿ ಮಾನವನ ಸರಪಳಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸುತ್ತಿದ್ದು, ಹರಿಹರದಿಂದ ಹಾದು  ಹಾವೇರಿ ಜಿಲ್ಲೆಯಲ್ಲಿ ಕೂಡಿಸುವ ನಿಟ್ಟಿನಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಗಡಿ ಭಾಗವಾದ ಕೊಡಿಯಾಲ, ಹೊಸಪೇಟೆ   ಹಾವೇರಿ ಜಿಲ್ಲಾ ಕೇಂದ್ರದವರೆಗೂ ಮಾನವ ಸರಪಳಿ ಪ್ರಕ್ರಿಯೆಗಳು ನಡೆಯುತ್ತದೆ. ಹಾಗಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು.  

ಈ ಸಂದರ್ಭದಲ್ಲಿ ಹರಿಹರ ತಹಶೀಲ್ದಾರ್ ಗುರುಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಕೃಷ್ಣಪ್ಪ, ಬಿಇಓ ಡಿ. ದುರುಗಪ್ಪ, ರಾಣೆಬೆನ್ನೂರು ತಹಶೀಲ್ದಾರ್ ಆರ್. ಹೆಚ್. ಭಗವಾನ್, ಪಿಎಸ್ಐಗಳಾದ ಸಿದ್ದೇಶ್, ಪ್ರಸನ್ನಕುಮಾರ್, ಕೊಡಿಯಾಲ ಹೊಸಪೇಟೆ ಗ್ರಾಪಂ ಸದಸ್ಯರಾದ ಬಸಣ್ಣೆಪ್ಪ, ದಿನೇಶ್ ನಲವಾಗಲು, ವಿ. ಎ. ಹೇಮಂತ್ ಕುಮಾರ್, ಅಂಗನವಾಡಿ ಶಿಕ್ಷಕಿ ಚಂದ್ರಕಲಾ ಪೂಜಾರ್ ಇತರರು ಹಾಜರಿದ್ದರು.

error: Content is protected !!