ದಾವಣಗೆರೆ, ಸೆ.12- ಮಧ್ಯ ಕರ್ನಾಟಕದ ಜೀವ ನಾಡಿ ಭದ್ರಾ ಜಲಾಶಯದ ಬಲದಂಡೆ ನಾಲೆಗೆ ಜಿಲ್ಲೆಯ ಅನೇಕ ಜಮೀನುಗಳು ಒಳಪಡುತ್ತವೆ. ಅದರಲ್ಲಿ ದಾವಣಗೆರೆ ಜಿಲ್ಲೆಯು ಅತೀ ಹೆಚ್ಚಿನ ಅಂದರೆ ಜಿಲ್ಲೆಯ ಸುಮಾರು 85 ಸಾವಿರ ಹೆಕ್ಟೇರಿಗಿಂತ ಹೆಚ್ಚಿನ ಜಮೀನುಗಳು ಭದ್ರಾ ಅಚ್ಚುಕಟ್ಟಿನ ಬಲದಂಡೆ ನಾಲೆಗೆ ಸೇರುತ್ತವೆ. ಅಲ್ಲದೇ, ಅಚ್ಚುಕಟ್ಟಿನ ಬಲದಂಡೆ ನಾಲೆಗೆ ಕೆಳ ಭಾಗದ ಜಿಲ್ಲೆಗಳಾದ ದಾವಣಗೆರೆ, ವಿಜಯನಗರ, ಹಾವೇರಿ ಮತ್ತು ಗದಗ ಜಿಲ್ಲೆಗಳು ಸೇರುತ್ತವೆ.
ಆದರೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವು 1984-85 ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಭದ್ರಾ ಅಚ್ಚುಕಟ್ಟಿನ ಕೆಳ ಭಾಗದ ರೈತರನ್ನು ಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡದೇ ಇರುವುದು ಕೆಳ ಭಾಗದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ.
ಜಿಲ್ಲೆಯ ಪ್ರಗತಿ ಪರ ಕೃಷಿಕ ಎನ್.ಜಿ. ಪುಟ್ಟಸ್ವಾಮಿ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಇನ್ನಾದರೂ ಜಿಲ್ಲೆಯ ಈ ಭಾಗದ ಜನತೆಗೆ ನ್ಯಾಯ ಒದಗಿಸಬೇಕು ಎಂದು ವಕೀಲರು, ರೈತರ ಪರ ಚಿಂತಕ ಕೊಂಡಜ್ಜಿ ಬಣಕಾರ್ ಶಿವಕುಮಾರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.