ದಾವಣಗೆರೆ,ಸೆ. 10- ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಆಚರಿಸುವ 68 ನೇ ವರ್ಷದ 1008 ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ನಗರದ ಎಸ್ಕೆಪಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಚರಿಸಲಾಯಿತು.
ಶ್ರೀ ಗಣಪತಿ ಸ್ಮರಣ ಪೂರ್ವಕ ಗಂಗಾ ಪೂಜೆಯೊಂದಿಗೆ ಶ್ರೀ ಜನಾರ್ದನ ಸ್ವಾಮಿ, ಶ್ರೀ ದೇವಿ ಮತ್ತು ಭೂದೇವಿ ದೇವರುಗಳಿಗೆ ವಿವಿಧ ಫಲಗಳಿಂದ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಯಿತು ಮತ್ತು 1008 ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ವ್ರತದ ನಂತರ ಮಧ್ಯಾಹ್ನ ಮಹಾಮಂಗಳಾರತಿ ನಡೆಸಲಾಯಿತು.
ಸಂಜೆ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಸರ್ವ ಸದಸ್ಯರ ಸಭೆಯು ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್. ಎಲ್. ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.